Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆ

ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆ

ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಸಾಲಿನಲ್ಲಿ ಲಯೊನೆಲ್ ಮೆಸ್ಸಿ (18 ಗೋಲು) ಅಗ್ರಸ್ಥಾನಕ್ಕೇರಿದ್ದಾರೆ. ಮೆಸ್ಸಿಗೆ ತೀವ್ರ ಪೈಪೋಟಿ ಒಡ್ಡುತ್ತಿರುವ ಫ್ರಾನ್ಸ್‌ನ ಕೈಲಿಯಾನ್ ಎಂಬಾಪೆ (16 ಗೋಲು) ಜರ್ಮನಿಯ ಮಾಜಿ ಆಟಗಾರ ಮಿರೋಸ್ಲಾವ್ ಕ್ಲೋಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೆಸ್ಸಿ ವಿಶ್ವದಾಖಲೆ: ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ

ಲಯೊನೆಲ್ ಮೆಸ್ಸಿ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ಕೀರ್ತಿಗೆ ಅರ್ಜೆಂಟೀನಾದ ತಾರೆ ಲಯೊನೆಲ್ ಮೆಸ್ಸಿ ಭಾಜನರಾಗಿದ್ದಾರೆ.

18: ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಗಳಿಸಿದ ಗೋಲುಗಳು

ಲಯೊನೆಲ್ ಮೆಸ್ಸಿ

ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಮೆಸ್ಸಿ, ಫಿಫಾ ವಿಶ್ವಕಪ್‌ನಲ್ಲಿ ಈವರೆಗೆ ಒಟ್ಟು 18 ಗೋಲುಗಳನ್ನು ಗಳಿಸಿದ್ದಾರೆ.

ಮೆಸ್ಸಿ ಸನಿಹದಲ್ಲಿ ಎಂಬಾಪೆ - 16 ಗೋಲುಗಳು

ಕೈಲಿಯಾನ್ ಎಂಬಾಪೆ

ಈಗ ಅತಿ ಹೆಚ್ಚು ಗೋಲು ಸಾಧಕರ ಸಾಲಿನಲ್ಲಿ ಮೆಸ್ಸಿಗೆ ಎಂಬಾಪೆ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ.

100ನೇ ಪಂದ್ಯದಲ್ಲಿ ಎಂಬಾಪೆ ದಾಖಲೆ

ಕೈಲಿಯಾನ್ ಎಂಬಾಪೆ

ಫ್ರಾನ್ಸ್ ಪರ 100ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಎಂಬಾಪೆ, ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಮಾಜಿ ಆಟಗಾರ ಮಿರೋಸ್ಲಾವ್ ದಾಖಲೆಯನ್ನು ಸರಿಗಟ್ಟಿದರು.

ಮೆಸ್ಸಿ-ಎಂಬಾಪೆ ನಡುವೆ ತೀವ್ರ ಪೈಪೋಟಿ

ಲಯೊನೆಲ್ ಮೆಸ್ಸಿ, ಕೈಲಿಯಾನ್ ಎಂಬಾಪೆ

2022ರ ವಿಶ್ವಕಪ್‌ಲ್ಲಿ ಮೆಸ್ಸಿ ಎಂಟು ಹಾಗೂ ಎಂಬಾಪೆ ಏಳು ಗೋಲುಗಳನ್ನು ಗಳಿಸಿದ್ದರು. ಈ ಬಾರಿ ಈಗಾಗಲೇ ಮೆಸ್ಸಿ ಐದು ಹಾಗೂ ಎಂಬಾಪೆ ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಸಾಧಕರು:

(ಕೃಪೆ: ಫಿಫಾ)

  • ಲಯೊನೆಲ್ ಮೆಸ್ಸಿ (ಅರ್ಜೆಂಟೀನಾ): 18

  • ಕೈಲಿಯಾನ್ ಎಂಬಾಪೆ (ಫ್ರಾನ್ಸ್): 16

  • ಮಿರೋಸ್ಲಾವ್ ಕ್ಲೋಸ್ (ಜರ್ಮನಿ): 16

  • ರೊನಾಲ್ಡೊ (ಬ್ರೆಜಿಲ್): 15

  • ಗೆರ್ಡ್ ಮುಲ್ಲರ್ (ಜರ್ಮನಿ): 14

Dailyhunt
Disclaimer: This content has not been generated, created or edited by Dailyhunt. Publisher: Prajavani