ಬೆಂಗಳೂರು: ಮಾಜಿ ಫುಟ್‌ಬಾಲ್ ಆಟಗಾರ ಸಿ.ರಾಮಚಂದ್ರ (73) ಅವರು ಭಾನುವಾರ ನಿಧನರಾದರು.
ಚಂದ್ರು ಎಂದೇ ಹೆಸರಾಗಿದ್ದ ಅವರು ಜೂನಿಯರ್ ಹಂತದಲ್ಲಿ ರಾಜ್ಯ (ಮೈಸೂರು) ತಂಡವನ್ನು ಪ್ರತಿನಿಧಿಸಿದ್ದರು.1980ರ ದಶಕದಲ್ಲಿ ಕೆಎಸ್‌ಆರ್‌ಟಿಸಿ ಫುಟ್‌ಬಾಲ್ ತಂಡದಲ್ಲಿ ಆಡಿದ್ದರು.
ಆಲ್ ಇಂಡಿಯಾ ಆರ್‌ಬಿಐ ಫುಟ್‌ಬಾಲ್ ಕ್ಲಬ್ ತಂಡದ ಗೋಲ್‌ಕೀಪರ್ ಆಗಿದ್ದರು.
ರಾಮಚಂದ್ರ ಅವರು ನಿವೃತ್ತಿಯ ನಂತರವೂ ಫುಟ್‌ಬಾಲ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಿಗೆ ತಪ್ಪದೆ ಹಾಜರಾಗಿ ಬೆಂಬಲ ನೀಡುತ್ತಿದ್ದರು ಎಂದು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ.
261103-4-189574018

