Dailyhunt Logo
  • Light mode
    Follow system
    Dark mode
    • Play Story
    • App Story
ಫ್ಯಾಕ್ಟ್ ಚೆಕ್: ಅಖಿಲೇಶ್ ಕೇಸರಿ ಟೋಪಿ ಹಾಕಿಕೊಂಡರೆಂಬುದು ಸುಳ್ಳು

ಫ್ಯಾಕ್ಟ್ ಚೆಕ್: ಅಖಿಲೇಶ್ ಕೇಸರಿ ಟೋಪಿ ಹಾಕಿಕೊಂಡರೆಂಬುದು ಸುಳ್ಳು

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ತಮ್ಮ ತಲೆ ಮೇಲಿದ್ದ ಕೆಂಪು ಟೋಪಿ/ಮುಂಡಾಸು ತೆಗೆದುಹಾಕಿ ಕೇಸರಿ ಬಣ್ಣದ ಟೋಪಿ ಹಾಕಿಕೊಂಡಿರುವ ವಿಡಿಯೊವನ್ನು ಎಎನ್‌ಐ, ಟೈಮ್ಸ್‌ ನೌ, ಎಬಿಪಿ ನ್ಯೂಸ್, ಎನ್‌ಡಿಟಿವಿಯಂಥ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯು, ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದಿಸೆಯಲ್ಲಿ ಅಖಿಲೇಶ್ ಅವರು 'ಮೃದು ಹಿಂದುತ್ವ'ದ ಮೊರೆ ಹೋಗಿದ್ದಾರೆ ಎಂದು ಪ್ರತಿಪಾದಿಸಿದೆ. ವಿಡಿಯೊ ಹಂಚಿಕೊಳ್ಳುತ್ತಿರುವ ಹಲವರು ಇದನ್ನೇ ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವುದು, ಅಕ್ಟೋಬರ್ 26ರಂದು ಅಖಿಲೇಶ್ ಯಾದವ್ ಅವರು ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದ ವಿಡಿಯೊ. ಕಾರ್ಯಕ್ರಮವು ಸಮಾಜವಾದಿ ಪಕ್ಷದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿದೆ. ಯಾದವ್ ಅವರು ತಮ್ಮ ತಲೆ ಮೇಲೆ ಕೆಂಪು ಟೋಪಿ/ಮುಂಡಾಸು ಹಾಕಿಕೊಳ್ಳುವುದು ನೇರಪ್ರಸಾರದ ವಿಡಿಯೊದಲ್ಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಪೀಯೂಷ್ ರಾಯ್‌ ಅವರನ್ನು ಈ ಕುರಿತು ಸಂಪರ್ಕಿಸಿದಾಗ, ಅಖಿಲೇಶ್ ಯಾದವ್ ಅವರ ತಲೆಮೇಲೆ ಇರುವುದು ಕೆಂಪು ಟೋಪಿ/ಮುಂಡಾಸು ಎಂದು ಅವರು ಸ್ಪಷ್ಟಪಡಿಸಿದರು. ಈ ವಿಚಾರವು ವಿವಾದವಾಗಿ ಮಾರ್ಪಟ್ಟ ನಂತರ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ ಅವರು, ಕೆಲವರಿಗೆ ಕೆಂಪು ಬಣ್ಣವು ಕೇಸರಿಯಂತೆ ಕಾಣುತ್ತದೆ ಎಂದಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani