Dailyhunt Logo
  • Light mode
    Follow system
    Dark mode
    • Play Story
    • App Story
ಫ್ಯಾಕ್ಟ್‌ ಚೆಕ್‌ | ತಂದೆಯ ಮರ್ಮಾಂಗ ಕತ್ತರಿಸಿದ ಪುತ್ರಿಯರು: ಇದು ಸುಳ್ಳು ಸುದ್ದಿ

ಫ್ಯಾಕ್ಟ್‌ ಚೆಕ್‌ | ತಂದೆಯ ಮರ್ಮಾಂಗ ಕತ್ತರಿಸಿದ ಪುತ್ರಿಯರು: ಇದು ಸುಳ್ಳು ಸುದ್ದಿ

ಸೊಂಟದಿಂದ ಕೆಳಗಿನ ಭಾಗ ರಕ್ತಸಿಕ್ತವಾಗಿದ್ದ ವ್ಯಕ್ತಿಯೊಬ್ಬ ಚೀರಾಡುತ್ತಾ ಮನೆಯೊಂದರಿಂದ ಹೊರ ಬರುತ್ತಿರುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 'ಆತ ಮೂವರು ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಈ ಸಲ ಆರೂವರೆ ವರ್ಷದ ನಾಲ್ಕನೇ ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದ.

ಆದರೆ, ಮೂವರು ಪುತ್ರಿಯರು ಸೇರಿ, ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇದು ಕೇರಳದಲ್ಲಿ ನಡೆದ ಘಟನೆ. ಧರ್ಮ ಯಾವುದು ಎನ್ನುವುದನ್ನು ಊಹಿಸಬೇಕಾದ ಅಗತ್ಯ ಇಲ್ಲ' ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು ಮಾಹಿತಿ.

ಹಂಚಿಕೊಳ್ಳಲಾದ ವಿಡಿಯೊದಲ್ಲಿ ನ್ಯೂಸ್‌21 ಎಂಬ ವಾಟರ್‌ ಮಾರ್ಕ್‌ ಇತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ 2026ರ ಜೂನ್‌ 30ರಂದು ನ್ಯೂಸ್‌ 21 ಬಾಂಗ್ಲಾ ಟಿವಿಯಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿತು. ವಿಡಿಯೊಕ್ಕೆ ಬಂಗಾಳಿ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿತ್ತು. ಅದನ್ನು ಭಾಷಾಂತರಿಸಿದಾಗ, 'ಫರಿದ್‌ಪುರದ ಭಂಗಾದಲ್ಲಿ ನಿದ್ರಿಸುತ್ತಿದ್ದ ಪತಿಯ ಮರ್ಮಾಂಗವನ್ನು ಪತ್ನಿ ಕತ್ತರಿಸಿದ್ದಾಳೆ. ಸ್ಥಳೀಯ ನಿವಾಸಿಗಳು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ' ಎಂದು ಬರೆಯಲಾಗಿತ್ತು. ಜೂನ್‌ 29ರಂದು ಈ ಘಟನೆ ನಡೆದಿತ್ತು. ಬಾಂಗ್ಲಾದೇಶದ ಇತರ ಹಲವು ಮಾಧ್ಯಮಗಳಲ್ಲೂ ಈ ಪ್ರಕರಣ ವರದಿಯಾಗಿತ್ತು. ಹಾಗಾಗಿ, ಇದು ಕೇರಳದಲ್ಲಿ ನಡೆದ ಘಟನೆ ಅಲ್ಲ. ತಪ್ಪು ಮಾಹಿತಿಯೊಂದಿಗೆ ವಿಡಿಯೊ ಹಂಚಲಾಗುತ್ತಿದೆ ಎಂದು ಬೂಮ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani