Dailyhunt Logo
  • Light mode
    Follow system
    Dark mode
    • Play Story
    • App Story
ಫ್ಯಾಕ್ಟ್‌ಚೆಕ್‌: ಅರುಣಾಚಲ ಪ್ರದೇಶವನ್ನು ಚೀನಾ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ

ಫ್ಯಾಕ್ಟ್‌ಚೆಕ್‌: ಅರುಣಾಚಲ ಪ್ರದೇಶವನ್ನು ಚೀನಾ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ

ಚೀನಾ ಸೇನೆಯು ಅರುಣಾಚಲ ಪ್ರದೇಶದ ಅಸಫಿಲಾ, ಲಾಂಗ್ಜು ಮತ್ತು ತಾಕ್‌ಸಿಂಗ್‌ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಸೇನೆಯ ಹಿರಿಯ ಅಧಿಕಾರಿ ಜನರಲ್‌ ಗಿರೀಶ್‌ ಕಾಲಿಯಾ (ಸ್ಪಿಯರ್‌ ಕೋರ್‌ನ ಜನರಲ್‌ ಆಫೀಸರ್‌ ಕಮಾಂಡಿಂಗ್‌) ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಹಲವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ಹಲವು ಮುಖಂಡರು ಇದನ್ನು ಹಂಚಿಕೊಂಡಿದ್ದಾರೆ. 'ಸರ್ಕಾರವು ಚೀನಾವನ್ನು ಎದುರಿಸಲು ಹೆಚ್ಚು ಸೈನಿಕರನ್ನು ಕಳುಹಿಸುವುದು ಬಿಟ್ಟು ಜೆನ್‌ ಝೀ ಹೋರಾಟವನ್ನು ಹತ್ತಿಕ್ಕಲು ಸೇನೆಯನ್ನು ನಿಯೋಜಿಸಿದೆ. ಇದು ನಿಜಕ್ಕೂ ನಾಚಿಕೆಗೇಡು' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊದ ಕೀಫ್ರೇಮ್‌ ಒಂದನ್ನು ಬಳಸಿಕೊಂಡು ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಹುಡುಕಿದಾಗ, 2023ರ ಅಕ್ಟೋಬರ್‌ 27ರಂದು ಎಎನ್‌ಐ ಸುದ್ದಿ ಸಂಸ್ಥೆಯ 'ಎಕ್ಸ್‌' ಖಾತೆಯಲ್ಲಿ ಅಪ್‌ಲೋಡ್‌ ಮಾಡಲಾದ ಮೂಲ ವಿಡಿಯೊ ಸಿಕ್ಕಿತು. ಅದು ಜಮ್ಮು ಮತ್ತು ಕಾಶ್ಮೀರದ ಕುಪ್ವರಾದಲ್ಲಿ ಮೇಜರ್‌ ಜನರಲ್‌ ಗಿರೀಶ್‌ ಕಾಲಿಯಾ (ಆಗ 28ನೇ ಇನ್‌ಫೆಂಟ್ರಿ ವಿಭಾಗದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಆಗಿದ್ದರು) ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಡಿಯೊ. ಅನುಮಾನ ಬಂದು ಈಗ 'ಎಕ್ಸ್‌'ನಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊದಲ್ಲಿನ ಧ್ವನಿಯನ್ನು ಪ್ರತ್ಯೇಕಿಸಿ ಡೀಪ್‌ಫೇಕ್‌ ಧ್ವನಿ ಪತ್ತೆ ಟೂಲ್‌ 'ಹಿಯಾ'ದ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಎಐ ಮೂಲಕ ಸೃಷ್ಟಿಸಿದ ಧ್ವನಿ ಎಂಬುದು ಖಚಿತವಾಯಿತು ಎಂದು ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani