Dailyhunt Logo
  • Light mode
    Follow system
    Dark mode
    • Play Story
    • App Story
ಫ್ಯಾಕ್ಟ್‌ಚೆಕ್‌

ಫ್ಯಾಕ್ಟ್‌ಚೆಕ್‌

ದಿವಂಗತ ನಟ ನಾನಾ ಪಾಟೇಕರ್‌ ಅವರು ಮಾತನಾಡುತ್ತಿರುವ ವಿಡಿಯೊ ತುಣುಕೊಂದನ್ನು 'the_vishu_102' ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ 8ರಂದು ಪೋಸ್ಟ್‌ ಮಾಡಲಾಗಿದೆ. ಆ ವಿಡಿಯೊದಲ್ಲಿ ಮರಾಠಿಯಲ್ಲಿ ಮಾತನಾಡುವ ಪಾಟೇಕರ್‌ ಅವರು ಅಭಿಜೀತ್‌ ಎಂಬ ವ್ಯಕ್ತಿಯನ್ನು ಉಲ್ಲೇಖಿಸಿ, ಕ್ಷಮೆಯಾಚಿಸುತ್ತಾರೆ.

ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. 'ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಸಿಜೆಪಿ ಮುಖಂಡ ಅಭಿಜೀತ್‌ ದೀಪ್ಕೆ ಅವರ ಬಳಿ ನಾನಾ ಪಾಟೇಕರ್‌ ಕ್ಷಮೆಯಾಚಿಸಿದ್ದಾರೆ' ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊದ ಕೀಫ್ರೇಮ್‌ ಒಂದನ್ನು ಬಳಸಿಕೊಂಡು ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಗೂಗಲ್‌ ಲೆನ್ಸ್‌ ಮೂಲಕ ಹುಡುಕಿದಾಗ ಇದೇ ವಿಡಿಯೊವನ್ನು ಮರಾಠಿ ಚಿತ್ರ ನಿರ್ಮಾಪಕ ಅಭಿಜೀತ್‌ ಘೋಲಾಪ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವುದು ಕಂಡುಬಂತು. ಅಕ್ಟೋಬರ್‌ 8ರಂದು ನಾನಾ ಪಾಟೇಕರ್‌ ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಸ್ತಂಭನದಿಂದ ನಿಧನರಾಗಿದ್ದರು. ಅದೇ ದಿನ ಅಭಿಜೀತ್‌ ಅವರು ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಈ ವಿಡಿಯೊ ಹಂಚಿಕೊಂಡಿದ್ದರು. ಉತ್ತರ ಅಮೆರಿಕದ ಚಲನಚಿತ್ರ ಒಕ್ಕೂಟದ ಚಿತ್ರೋತ್ಸವದಲ್ಲಿ ಹಾಜರಾಗಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೋರಿ ಪಾಟೇಕರ್‌ ಅವರು ಈ ವಿಡಿಯೊ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಅಭಿಜೀತ್‌ ಅವರು ಬರೆದುಕೊಂಡಿದ್ದಾರೆ. ಪೂರ್ತಿ ವಿಡಿಯೊವನ್ನು ನೋಡಿದಾಗ, ಅಭಿಜೀತ್‌ ಅವರೊಂದಿಗೆ 2011ರಲ್ಲಿ 'ದೆಊಹ್‌' ಎಂಬ ಚಿತ್ರದಲ್ಲಿ ಕೆಲಸ ಮಾಡಿರುವುದನ್ನೂ ನಾನಾ ಅವರು ನೆನಪಿಸಿಕೊಂಡಿದ್ದು ಕಾಣಿಸಿತು. ಪಾಟೇಕರ್‌ ಅವರು ವಿಡಿಯೊದಲ್ಲಿ ಚಿತ್ರ ನಿರ್ಮಾಪಕ ಅಭಿಜೀತ್‌ ಘೊಲಾಪ್‌ ಅವರನ್ನು ‍ಪ್ರಸ್ತಾಪಿಸಿದ್ದಾರೆಯೇ ವಿನಾ, ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಅವರನ್ನಲ್ಲ ಎಂಬುದು ಸ್ಪಷ್ಟವಾಯಿತು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

261020-51-983646295

Dailyhunt
Disclaimer: This content has not been generated, created or edited by Dailyhunt. Publisher: Prajavani