Dailyhunt Logo
  • Light mode
    Follow system
    Dark mode
    • Play Story
    • App Story
ಗದಗ ದರ್ಗಾ-ದೇವಸ್ಥಾನ ಉದ್ಘಾಟನೆ ಇಂದು ಸಂಜೆ 5.30ಕ್ಕೆ

ಗದಗ ದರ್ಗಾ-ದೇವಸ್ಥಾನ ಉದ್ಘಾಟನೆ ಇಂದು ಸಂಜೆ 5.30ಕ್ಕೆ

ಗದಗ: ನಗರದ ಈಟಿ ಓಣಿಯಲ್ಲಿ ನಿರ್ಮಾಣಗೊಂಡ ಹಜರತ್ ಮಹಬೂಬ್‌ ಸುಬಾನಿ ದರ್ಗಾ ಹಾಗೂ ತಾಯಮ್ಮದೇವಿ ದೇವಸ್ಥಾನದ ಉದ್ಘಾಟನಾ ಸಮಾರಂಭವು ಜುಲೈ 4ರಂದು ಸಂಜೆ 5.30ಕ್ಕೆ ಜರುಗಲಿದೆ.

ಶಾಸಕ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಪರವೀನಬಾನು ಅಬ್ದುಲ್‍ಮುನಾಫ್ ಮುಲ್ಲಾ ಅಧ್ಯಕ್ಷತೆ ವಹಿಸುವರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ಫಕ್ಕೀರಪ್ಪ ಹೆಬಸೂರ, ಮೆಹಬೂಬಸಾಬ್‌ ಡಿ. ನದಾಫ, ಬರಕತಅಲಿ ಮುಲ್ಲಾ, ಲಕ್ಷ್ಮೀ ಸಿದ್ದಮ್ಮನಹಳ್ಳಿ, ಎಚ್.ಕೆ. ಮುಲ್ಲಾ ಮೊದಲಾದವರು ಪಾಲ್ಗೊಳ್ಳುವರು ಎಂದು ಅಬ್ದುಲ್ ಮುನಾಫ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-23-65838542

Dailyhunt
Disclaimer: This content has not been generated, created or edited by Dailyhunt. Publisher: Prajavani