Dailyhunt Logo
  • Light mode
    Follow system
    Dark mode
    • Play Story
    • App Story
ಗದಗ ತೋಂಟದಾರ್ಯ ಮಠದಲ್ಲಿ 2,816ನೇ ಶಿವಾನುಭವ, ಸ್ವರ ನಮನ ಇಂದು

ಗದಗ ತೋಂಟದಾರ್ಯ ಮಠದಲ್ಲಿ 2,816ನೇ ಶಿವಾನುಭವ, ಸ್ವರ ನಮನ ಇಂದು

ಗದಗ: ಇಲ್ಲಿನ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಿಂದ 2,816ನೇ ಶಿವಾನುಭವವು ಸೆ.‌ 21ರಂದು ಸಂಜೆ 7 ಗಂಟೆಗೆ ಜರುಗಲಿದೆ.

ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಸ್ಮರಣೆ ಅಂಗವಾಗಿ ಸಂಗೀತ, ಕೀರ್ತನ, ಗಾಯನ ನಮನ ನಡೆಯಲಿದೆ.

ವೀರೇಶ ಕಿತ್ತೂರ, ಕಲ್ಲಿನಾಥ ಶಾಸ್ತ್ರಿ, ವಯೊಲಿನ್‌ ವಾದಕ ನಾರಾಯಣ ಹಿರೇಕೊಳಚಿ, ತಬಲಾ ವಾದಕ ಹನಮಂತ ಕೊಡಗಾನೂರ, ಕೊಳಲುವಾದಕ ಅದ್ವೈತ ಶಿವಪುರ ಅವರಿಂದ ಸ್ವರ ನಮನ ಸೇವೆ ಜರುಗಲಿದೆ . ವಚನ ಸಂಗೀತ-ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ್, ಧರ್ಮ ಗ್ರಂಥ ಪಠಣ-ಮಹೇಶ ಆರ್. ಪುರಾಣಿಕ ಮಠ, ವಚನ ಚಿಂತನ-ಮಹಾಂತೇಶ ಆರ್. ಪುರಾಣಿಕಮಠ, ಬಸವಣ್ಣೆಮ್ಮ ನಡಮನಿ, ದಯಾನಂದ ಬಿರಾದಾರ-ದಾಸೋಹ ಸೇವೆ ನಡೆಯಲಿದೆ.

260921-23-1603151751

Dailyhunt
Disclaimer: This content has not been generated, created or edited by Dailyhunt. Publisher: Prajavani