Dailyhunt Logo
  • Light mode
    Follow system
    Dark mode
    • Play Story
    • App Story
ಗಂಗಾವತಿ ಮತದಾರರಿಗೆ ಗಣತಿ ನಮೂನೆ ವಿತರಣೆ

ಗಂಗಾವತಿ ಮತದಾರರಿಗೆ ಗಣತಿ ನಮೂನೆ ವಿತರಣೆ

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಗ್ರಾಮದ 5ನೇ ವಾರ್ಡ್‌ನ ಹರಿಜನ ಕಾಲೊನಿಯ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ಬಿಎಲ್‌ಒ ನೇತೃತ್ವದಲ್ಲಿ ಗಣತಿ ನಮೂನೆ ವಿತರಿಸಿದರು.

ಗ್ರಾಮೀಣ ಭಾಗದಲ್ಲಿ ಬಹುತೇಕರು ಅನಕ್ಷರಸ್ಥರಿರುವ ಕಾರಣ ಎಸ್‌ಐಆರ್ ಬಗ್ಗೆ ಅವರಿಗೆ ಮಾಹಿತಿಯೇ ಇರುವುದಿಲ್ಲ.

ಅವರಿಗೆ ಮಾಹಿತಿ ಜೊತೆಗೆ ಜಾಗೃತಿ ಮೂಡಿಸಬೇಕು ಎಂದರು.

ಕಾಲೊನಿಯಲ್ಲಿ 100ಕ್ಕೂ ಹೆಚ್ಚು ಮತದಾರರಿಗೆ ಗಣತಿ ನಮೂನೆ ನೀಡಲಾಯಿತು.

ಗ್ರಾಮಲೆಕ್ಕಿಗ ರಾಘವೇಂದ್ರ, ಬಿಎಲ್‌ಒ ಝಾನ್ಸಿರಾಣಿ, ವಿ.ಎಸ್.ಎಸ್.ಎನ್.ಸೊಸೈಟಿ ಅಧ್ಯಕ್ಷ ಪಿ.ಸ್ವಾಮಿ, ಶಿವಕುಮಾರ, ಆದಿನಾರಾಯಣ, ರೆಡ್ಡಿ ನಾಗೇಶ್ವರರಾವ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-35-290623239

Dailyhunt
Disclaimer: This content has not been generated, created or edited by Dailyhunt. Publisher: Prajavani