Dailyhunt Logo
  • Light mode
    Follow system
    Dark mode
    • Play Story
    • App Story
Gold Silver Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ

Gold Silver Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ

ವದೆಹಲಿ: ಬೆಳ್ಳಿ ಹಾಗೂ ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕೆಳಕ್ಕೆ ಬಂದಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನದ (ಶೇ 99.9ರಷ್ಟು ಪರಿಶುದ್ಧ) ಬೆಲೆಯು 10 ಗ್ರಾಂಗೆ ₹2,500ರಷ್ಟು ಕಡಿಮೆ ಆಗಿದೆ.

ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಅಮೂಲ್ಯ ಲೋಹಗಳನ್ನು ಮಾರಾಟ ಮಾಡಿದ್ದಾರೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಹೇಳಿದೆ.

ಸತತ ಒಂಬತ್ತು ದಿನಗಳಿಂದ ಏರಿಕೆ ಕಾಣುತ್ತಿದ್ದ ಬೆಳ್ಳಿಯ ಬೆಲೆಯು ಗುರುವಾರ ಕೆ.ಜಿ.ಗೆ ₹14,300ರಷ್ಟು ಕುಸಿದಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಬೆಲೆಯು ₹3.20 ಲಕ್ಷ ಆಗಿದೆ.

'ಯುರೋಪಿನ ದೇಶಗಳ ಮೇಲೆ ಸುಂಕ ಹೇರುವ ಬೆದರಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹಿಂಪಡೆದರು. ಗ್ರೀನ್‌ಲ್ಯಾಂಡ್‌ ಕುರಿತಾಗಿ ಮುಂದಿನ ಹೆಜ್ಜೆ ಇರಿಸಲು ಚೌಕಟ್ಟೊಂದನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಇದಾದ ನಂತರದಲ್ಲಿ ಚಿನ್ನ, ಬೆಳ್ಳಿಯ ಬೆಲೆಯು ಇಳಿಕೆ ಕಂಡಿದೆ' ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟಿಸ್‌ನ ಸರಕುಗಳ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani