ಎರಡು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್‌ನಲ್ಲಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಅವರು ಜುಲೈ 5 ರಂದು ವಿವಾಹವಾಗಿದ್ದಾರೆ. ಈ ಮೂಲಕ ಅಮೀರ್ ಖಾನ್ ತಮ್ಮ 3ನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ವಿವಾಹವನ್ನು ಆಯೋಜಿಸಲಾಗಿತ್ತು.
ಆಪ್ತ ಸ್ನೇಹಿತರು, ಕುಟುಂಬದವರು ಮತ್ತು ಮಕ್ಕಳ ಸಮ್ಮುಖದಲ್ಲಿ ಅಮೀರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಜೊತೆ ವಿವಾಹವಾಗಿದ್ದಾರೆ. ಸದ್ಯ ಮದುವೆಯ ,ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಮೀರ್ ಖಾನ್ ಅವರ ವಕ್ತಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿವಾಹದ ಕೆಲವು ಚಿತ್ರಗಳನ್ನು ಹಂಚಿಕೊಂಡು, 'ಈ ಸುಂದರ ಕ್ಷಣವು ಪ್ರೀತಿ ಮತ್ತು ನಗುವಿನ ಆಚರಣೆಯಾಗಿದೆ. ಮರೆಯಲಾಗದ ಆಚರಣೆ, ಅಮೀರ್ ಖಾನ್ ಅವರ ವಿವಾಹವನ್ನು ನೋಡಿ' ಎಂದು ಬರೆದುಕೊಂಡಿದ್ದಾರೆ.
ಫೋಟೊದಲ್ಲಿ ಅಮೀರ್ ಖಾನ್ ಮತ್ತು ಅವರ ಪತ್ನಿ ಗೌರಿ ಸ್ಪ್ರ್ಯಾಟ್ ಅವರು ವಿವಾಹಕ್ಕೆ ಮುನ್ನ ದಾಖಲೆಗಳಿಗೆ ಸಹಿ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಅಮೀರ್ ಖಾನ್ ಅವರ ಮಕ್ಕಳು ಹಾಗೂ ತಾಯಿ ಕೂಡ ಜೊತೆಗಿದ್ದಾರೆ. ವಿವಾಹದಲ್ಲಿ ಅಮೀರ್ ಖಾನ್ ಅವರ ಮಕ್ಕಳಾದ ಆಜಾದ್ ರಾವ್ ಖಾನ್, ಜುನೈದ್ ಖಾನ್ ಮತ್ತು ಇರಾ ಖಾನ್ ಭಾಗವಹಿಸಿದ್ದರು.
ವರದಿಗಳ ಪ್ರಕಾರ, ಅಮೀರ್ ಮತ್ತು ಗೌರಿ ಸ್ಪ್ರ್ಯಾಟ್ 25 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವುದಾಗಿಯೂ ಮತ್ತು ಕಳೆದ ಒಂದು ವರ್ಷದಿಂದ ಜೊತೆಗೆ ಇದ್ದರು ಎಂದು ವರದಿಯಾಗಿದೆ.
ಅಚ್ಚರಿಯ ಸಂಗತಿಯೆಂದರೆ, ನಟ ಅಮೀರ್ ಖಾನ್ ಚಿತ್ರರಂಗದ ಯಾವುದೇ ನಟ-ನಟಿಯರಿಗೆ ಆಹ್ವಾನ ನೀಡಿಲ್ಲ. ಈ ಹಿಂದೆ ಅಮೀರ್ ಖಾನ್ ಮದುವೆಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಗಮಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಆ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಚಿತ್ರರಂಗದ ಯಾರನ್ನೂ ಕರೆದಿಲ್ಲ.

