ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಮೃತಧಾರೆ' ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಒಳ್ಳೆತನದ ಮುಖವಾಡ ಹಾಕಿದ್ದ ಶಾಕುಂತಲಾಳ ಅಸಲಿ ಮುಖ ಬಯಲಾಗಿದೆ. ಜೀ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ.
ಅದರಲ್ಲಿ ತನ್ನ ಮಗನನ್ನು ಜೈಲಿಗೆ ಕಳುಸಿದ್ದ ಶಾಕುಂತಲಾ ತಾನೇ ಜಾಮೀನು ನೀಡಿ ಹೊರ ಬರುವಂತೆ ಮಾಡುತ್ತಾಳೆ. ತನಗೆ ಜಾಮೀನು ಕೊಟ್ಟಿದ್ಯಾರು ಎಂದು ಜೈದೇವ್ ಗೊಂದಲದಲ್ಲಿ ಆಚೆಬಂದು ನೋಡಿದಾಗ ಶಾಕುಂತಲಾಳನ್ನು ನೋಡುತ್ತಿದ್ದಂತೆ ಅಚ್ಚರಿಗೊಳಗಾಗುತ್ತಾನೆ. ಆಗ ಶಾಕುಂತಲಾ ಅಸಲಿ ಮುಖವಾಡ ಕಳಚಿ ಬೀಳುತ್ತದೆ.
ಕಳೆದ ಸಂಚಿಕೆಯಲ್ಲಿ ಗೌತಮ್ ಹಾಗೂ ಭೂಮಿಕಾ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಇದೇ ವೇಳೆ ಕೇಕ್ ಒಳಗಡೆ ಬಾಂಬ್ ಇರುವ ವಿಚಾರ ಗೌತಮ್‌ಗೆ ಗೊತ್ತಾಗುತ್ತದೆ. ಈ ವಿಚಾರ ತಿಳಿಯುತ್ತಿದ್ದಂತೆ ಕೇಕ್ ಕತ್ತರಿಸುವುದನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. ಆಗ ಇದರ ಹಿಂದಿದ್ದ ಮಾಸ್ಟರ್ ಮೈಂಡ್ ಶಾಕುಂತಲಾ ಪ್ಲಾನ್ ಹಾಳಾಗುತ್ತದೆ. ಆಗ ಯಾರಿಗೂ ಅನುಮಾನ ಬಾರದಂತೆ, ಇದರ ಹಿಂದೆ ಜೈದೇವ್ ಕೈವಾಡವಿದೆ ಎಂದು ಎಲ್ಲರನ್ನು ನಂಬಿಸಿ, ತಾನೇ ಪೊಲೀಸರಿಗೆ ಕರೆ ಮಾಡಿ ಮಗ ಜೈಲಿಗೆ ಹೋಗುವಂತೆ ಮಾಡುತ್ತಾಳೆ.
ಈಗ ಮಗನಿಗೆ ಬೈಲ್ ಕೊಡಿಸಿದ ಶಾಕುಂತಲಾ, ಗೌತಮ್ ಹಾಗೂ ಭೂಮಿಕ ವಿರುದ್ಧ ಕೆಂಡ ಹಾರುತ್ತಿದ್ದಾರೆ. ಅಮ್ಮನನ್ನು ನಂಬಿದ್ದ ಗೌತಮ್‌ಗೆ ಈ ವಿಚಾರ ಹೇಗೆ ಗೊತ್ತಾಗುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ಬಯಲಾಗಲಿದೆ. ಸದ್ಯ ಇದೇ ತಿರುವಿನಲ್ಲಿ ಧಾರಾವಾಹಿ ಮುನ್ನುಗ್ಗುತ್ತಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

