Dailyhunt
ಗ್ರೀಸ್‌ನ ದಕ್ಷಿಣ ದ್ವೀಪದಲ್ಲಿ ಪ್ರಬಲ ಭೂಕಂಪ

ಗ್ರೀಸ್‌ನ ದಕ್ಷಿಣ ದ್ವೀಪದಲ್ಲಿ ಪ್ರಬಲ ಭೂಕಂಪ

ಅಥೆನ್ಸ್‌: 'ಗ್ರೀಸ್‌ನ ದಕ್ಷಿಣ ಭಾಗದ ದ್ವೀಪವಾದ ಕ್ರೀಟ್‌ನಲ್ಲಿ ಸೋಮವಾರ 5.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಈ ಪ್ರದೇಶದಲ್ಲಿ ಭೂಕಂಪದ ಬಳಿಕ ಸುಮಾರು 9 ಬಾರಿ ಲಘು ಕಂಪನಗಳು ಆಗಿವೆ.

ಈ ಹಿನ್ನೆಲೆಯಲ್ಲಿ ಶಾಲೆಗಳಿಂದ ವಿದ್ಯಾರ್ಥಿಗಳು, ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಕೇಂದ್ರ ಬಿಂದು ಪತ್ತೆಯಾದ ಸ್ಥಳದ ಸಮೀಪವಿರುವ ಗ್ರಾಮಗಳು ಹಾನಿಗೊಳಗಾಗಿವೆ' ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani