ಚಾಮರಾಜನಗರ: ಗೃಹರಕ್ಷಕರ ದಕ್ಷಿಣ ವಲಯ ಮಟ್ಟದ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭ ನ.4ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕವಾಯತು ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕೃತಿ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಕೊಳ್ಳೇಗಾಲ ವಿಭಾಗದ ಡಿವೈಎಸ್‌ಪಿ ಜೆ.
ಮೋಹನ್, ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಡಿವೈಎಸ್‌ಪಿ ಜಿ.ಆರ್. ಸೋಮಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟ ಎಸ್.ಜಿ. ಮಹಾಲಿಂಗಸ್ವಾಮಿ, ಮೈಸೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಪ್ರಭಾರ ಸಮಾದೇಷ್ಟ ಸಿ.ಮಲ್ಲಿಕ್, ಮಡಿಕೇರಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಗೂ ಪ್ರಭಾರ ಸಮಾದೇಷ್ಟ ಪಿ.ಎ.ಸೂರಜ್, ಮಂಡ್ಯ ಜಿಲ್ಲೆಯ ಗೃಹರಕ್ಷಕದಳದ ಜಿಲ್ಲಾ ಪ್ರಭಾರ ಸಮಾದೇಷ್ಟ ಎಲ್.ನಿರಂಜನ, ಹಾಸನ ಜಿಲ್ಲೆ ಗೃಹರಕ್ಷಕದಳದ ಸಮಾದೇಷ್ಟ ಕೆ.ಪಿ.ವಿರೂಪಾಕ್ಷ ಭಾಗವಹಿಸುವರು.
261104-37-20294710

