ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಜುಲೈ 7ರಂದು ಮೋಡ ಬಿತ್ತನೆಗೆ ಸಿದ್ಧತೆ ನಡೆದಿದೆ. ಆದರೆ, ಇದಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಂದ ಇನ್ನೂ ಅನುಮತಿ ಸಿಕ್ಕಿಲ್ಲ.
ಮೋಡ ಬಿತ್ತನೆಗೆ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾನಿರ್ದೇಶನಾ ಲಯ) ವಿಧಿಸಿರುವ ಷರತ್ತಿನ ಪ್ರಕಾರ, ಸ್ಥಳೀಯ ಪ್ರಾಧಿಕಾರ ಅಥವಾ ಜಿಲ್ಲಾಧಿ ಕಾರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
'ಡಿಜಿಸಿಎ ಅನುಮತಿಯೇ ಅಂತಿಮವೆಂದು ಮೋಡ ಬಿತ್ತನೆಗೆ ಶಾಸಕರು ದಿನಾಂಕ ಘೋಷಿಸಿದ್ದಾರೆ. ಇದರ ಮೂಲಕ ಡಿಜಿಸಿಎ ವಿಧಿಸಿದ್ದ ಷರತ್ತುಗಳನ್ನ ಆರಂಭದಲ್ಲೇ ಉಲ್ಲಂಘಿಸುತ್ತಿ ದ್ದಾರೆ. ಮೋಡ ಬಿತ್ತನೆಗೆ ಸಂಬಂಧಿಸಿ ದಂತೆ ಶಾಸಕ ಪ್ರಕಾಶ ಕೋಳಿವಾಡ ಮುಂದಾಳತ್ವದ 'ಪಿಕೆಕೆ' ಸಂಸ್ಥೆಯ ಪ್ರತಿನಿಧಿಗಳು, ಪತ್ರ ನೀಡಿದ್ದಾರೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಗೆ (ಐಎಂಡಿ) ಪತ್ರ ಬರೆಯಲಾಗಿದ್ದು, ಸದ್ಯ ಅಲ್ಲಿಂದ ಉತ್ತರ ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತ ಅನುಮತಿ ನೀಡಿಲ್ಲ ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಸಂಪರ್ಕಿಸುತ್ತೇನೆ': ಮೋಡ ಬಿತ್ತನೆಗೆ ಡಿಜಿಸಿಎ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಅನುಮತಿ ಬಗ್ಗೆ ಗೊತ್ತಿಲ್ಲ. ಅವರನ್ನು ಸಂಪರ್ಕಿಸುತ್ತೇನೆ. ಮೋಡ ಬಿತ್ತನೆಗೆ ಜುಲೈ 7ರಂದು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-51-2115417137

