Dailyhunt Logo
  • Light mode
    Follow system
    Dark mode
    • Play Story
    • App Story
ಹೈದರಾಬಾದ್‌ನ ರಸ್ತೆಗೆ ಟ್ರಂಪ್ ಹೆಸರು: ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

ಹೈದರಾಬಾದ್‌ನ ರಸ್ತೆಗೆ ಟ್ರಂಪ್ ಹೆಸರು: ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಹೈದರಾಬಾದ್‌ನ ಪ್ರಮುಖ ರಸ್ತೆಗೆ ತಮ್ಮ ಹೆಸರು ಇಟ್ಟಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಅಮೆರಿಕ ದೂತಾವಾಸ ಕಚೇರಿ ಬಳಿಯಿರುವ ರಸ್ತೆಗೆ 'ಡೊನಾಲ್ಡ್‌ ಟ್ರಂಪ್‌ ಅವೆನ್ಯೂ' ಎಂದು ನಾಮಕರಣ ಮಾಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರಿಗೆ ಈ ರೀತಿಯ ಗೌರವ ಲಭಿಸಿದೆ. ಧನ್ಯವಾದಗಳು' ಎಂದು ಹೇಳಿದ್ದಾರೆ.

ಇದೇ ಪೋಸ್ಟ್‌ನಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ರಸ್ತೆಯನ್ನು ಉದ್ಘಾಟಿಸುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ಅಮೆರಿಕದ ಪ್ರಮುಖ ತಾಂತ್ರಿಕ ಸಂಸ್ಥೆಗಳಾದ ಮೈಕ್ರೋಸಾಫ್ಟ್‌, ಗೂಗಲ್ ಮತ್ತು ಅಮೆಜಾನ್ ಸಂಸ್ಥೆಗಳ ಕಚೇರಿಗಳು 'ಡೊನಾಲ್ಡ್‌ ಟ್ರಂಪ್‌ ಅವೆನ್ಯೂ' ರಸ್ತೆಯ ಸಮೀಪದಲ್ಲಿವೆ.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದ ಬೆಳವಣಿಗೆಯಲ್ಲಿ ಹೈದರಾಬಾದ್‌ನ ಕೊಡುಗೆಯನ್ನು ಗುರುತಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿತ್ತು.

ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಡೊನಾಲ್ಡ್‌ ಟ್ರಂಪ್, ಗೂಗಲ್‌ ಹೆಸರು
Dailyhunt
Disclaimer: This content has not been generated, created or edited by Dailyhunt. Publisher: Prajavani