Dailyhunt Logo
  • Light mode
    Follow system
    Dark mode
    • Play Story
    • App Story
ಹಳೇಬೀಡು: ಶುಂಠಿ ಹೊಲಕ್ಕೆ ಬೆದರು ಬೊಂಬೆ ರಕ್ಷಣೆ

ಹಳೇಬೀಡು: ಶುಂಠಿ ಹೊಲಕ್ಕೆ ಬೆದರು ಬೊಂಬೆ ರಕ್ಷಣೆ

ಹಳೇಬೀಡು: ಬೆಳೆಗಳನ್ನು ಪಶು, ಪಕ್ಷಿಗಳಿಂದ ರಕ್ಷಣೆ ಮಾಡಲು, ಬೆಳೆಗಳಿಗೆ ದೃಷ್ಟಿ ತಾಗಬಾರದು ಎಂಬ ನಂಬಿಕೆಯಿಂದ ರೈತರು ಬೆಳೆಯ ನಡುವೆ ಬೆದರು ಬೊಂಬೆ ನಿಲ್ಲಿಸುವುದು ಚಾಲ್ತಿಯಲ್ಲಿದೆ.

ಬಸ್ತಿಹಳ್ಳಿಯಲ್ಲಿ ಗುತ್ತಿಗೆ ಮಾಡಿಕೊಂಡ ಜಮೀನಿನಲ್ಲಿ ಶುಂಠಿ ಬೆಳೆದಿರುವ ಬಸವರಾಜಪುರದ ರೈತ ಬುದ್ಧಿವಂತ ವಿಶೇಷವಾದ ಬೆದರು ಬೊಂಬೆ ನಿರ್ಮಿಸಿ ಜನರ ದೃಷ್ಟಿ ಹರಿಯುವಂತೆ ಮಾಡಿದ್ದಾರೆ.

ಕೇದಾರೇಶ್ವರ ದೇವಾಲಯ ಬಳಿ ಶುಂಠಿ ಹೊಲ ಇರುವುದರಿಂದ ಆಕರ್ಷಕವಾದ ಬೆದರು ಬೊಂಬೆ ಪ್ರವಾಸಿಗರ ಗಮನಕ್ಕೂ ಬರುತ್ತಿದೆ. ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ, ಫೋಟೊ ಕ್ಲಿಕ್ಕಿಸಿಕೊಳ್ಳುವ ದೖಶ್ಯ ಆಗಾಗ್ಗೆ ಕಾಣಿಸುತ್ತಿರುತ್ತದೆ.

ಬಣ್ಣದ ಸೀರೆಗಳಿಂದ ಬೆದರು ಬೊಂಬೆಯನ್ನು ಸಿಂಗರಿಸಲಾಗಿದೆ. ಮಹಿಷಾಸುರನನ್ನು ಹೋಲುವ ಮುಖವಾಡ ಹಾಕಲಾಗಿದೆ. ಕರಾವಳಿಯ ಯಕ್ಷಗಾನದ ಪಾತ್ರಧಾರಿ ಯಂತೆಯೂ ಬೊಂಬೆ ಕಾಣುತ್ತಿದೆ. ದಪ್ಪದಾದ ಮೀಸೆ, ಅಗಲವಾಗಿ ಕಣ್ಣುಗಳು, ಬಾಯಿಂದ ಹೊರ ಚಾಚಿದ ಕೋರೆ ಹಲ್ಲುಗಳು ಹಾಗೂ ನಾಲಿಗೆ ಭಯ ಹುಟ್ಟಿಸುವಂತಿದೆ. ವಿಭೂತಿ ಧರಿಸಿದ ಹಣೆಯಲ್ಲಿ ದೊಡ್ಡ ಅರಿಶಿಣದ ಬೊಟ್ಟಿನ ಮಧ್ಯದಲ್ಲಿ ಚಿಕ್ಕದಾದ ಕುಂಕುಮದ ಬೊಟ್ಟು ಇಡಲಾಗಿದೆ.

ಕಾಡು ಪ್ರಾಣಿಗಳ ಉಪಟಳ ಹಾಗೂ ಬೆಳೆಗೆ ಕೆಟ್ಟ ದೃಷ್ಟಿ ಹರಿಯದಿರಲಿ ಎಂದು ನಿರ್ಮಿಸಿರುವ ಬೆದರು ಬೊಂಬೆಯಲ್ಲಿ ಕಲೆ ಅರಳಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಹಳೆ ಪ್ಯಾಂಟ್ ಹಾಗೂ ಅಂಗಿಗೆ ಒಣಗಿದ ಹುಲ್ಲು ತುಂಬಿಸಿ, ಅಂಗಿ ಕಾಲರ್ ನಡುವೆ, ಮಡಿಕೆ ಇಟ್ಟು, ಕಣ್ಣು, ಮೂಗು, ಬಾಯಿ ಬರೆದು ಸೂರ್ಯಕಾಂತಿ, ರಾಗಿ, ಜೋಳ, ದವಸ, ಧಾನ್ಯಗಳ ಹೊಲದಲ್ಲಿ ಬೆದರುಬೊಂಬೆ ನಿಲ್ಲಿಸುತ್ತಾರೆ. ಈಚೆಗೆ ವಿಶೇಷ ಬೆದರು ಬೊಂಬೆ ನಿಲ್ಲಿಸುವುದನ್ನು ರೈತರು ರೂಢಿಸಿಕೊಂಡಿದ್ದಾರೆ. ಹಳೆಯ ಕುರ್ತಾ, ಪ್ಯಾಂಟ್, ಪಂಜಾಬಿ ಡ್ರೆಸ್‌ಗಳಿಗೆ ಹುಲ್ಲು ತುಂಬಿಸಿ ಬೆದರು ಬೊಂಬೆ ನಿಲ್ಲಿಸುತ್ತಿದ್ದಾರೆ.

ಕೆಲವು ಕಡೆ ನೇರಿಗೆ ಹಿಡಿದು ಸೀರೆ ತೊಡಿಸಿದ ಬೆದರು ಬೊಂಬೆ ಕಂಡು ಬರುತ್ತವೆ. ಲಾಭ, ನಷ್ಟ ಏನೇ ಇದ್ದರೂ ಬೇಸಾಯದಲ್ಲಿ ತಂತ್ರಗಳನ್ನು ಅನುಸರಿಸುವ ರೈತನನ್ನು ವಿಜ್ಙಾನಿ, ಸಂಶೋಧಕ ಎಂದೆಲ್ಲ ಕರೆಯುತ್ತಾರೆ. ಬಹುತೇಕ ರೈತರು, ಕಲಾವಿದರು ಆಗಿದ್ದಾರೆ ಎಂಬುದಕ್ಕೆ ಜಮೀನಿನಲ್ಲಿ ನಿಲ್ಲಿಸುವ ಬೆದರುಬೊಂಬೆಗಳೆ ಸಾಕ್ಷಿಯಾಗಿವೆ ಎನ್ನುತ್ತಾರೆ ರೈತ ಗುರುಶಾಂತಪ್ಪ.

ಸೂರ್ಯಕಾಂತಿ, ರಾಗಿ, ಜೋಳದ ಹೊಲಕ್ಕೆ ಲಗ್ಗೆ ಇಡುವ ಪಕ್ಷಿಗಳು ಬೆದರು ಬೊಂಬೆ ನೋಡಿ ಭಾಗಶಃ ದೂರ ಸರಿಯುತ್ತವೆ. ಗೆಡ್ಡೆ, ಗೆಣಸಿನ ಬೆಳೆಯನ್ನು ಮಣ್ಣಿನಲ್ಲಿ ಹೂತು ತಿನ್ನುವ ಹಂದಿಗಳು ಬೆದರುಬೊಂಬೆ ನೋಡಿದರೆ ಜಮೀನಿಗೆ ಬರಲು ಹೆದರುತ್ತವೆ ಎನ್ನುತ್ತಾರೆ ರೈತ ಗಂಗಾಧರಪ್ಪ.

ಬುದ್ಧಿವಂತ, ಬಸವರಾಜಪುರ ಶುಂಠಿ ಬೆಳೆಗಾರ ಪೈರಿನ ನಡುವೆ ಬೆದರುಬೊಂಬೆ ನಿಲ್ಲಿಸುವ ಸಂಪ್ರದಾಯ ನಮ್ಮ ಪೂರ್ವಿಕರಿಂದ ಕಲಿತಿದ್ದೇವೆ. ಯಾವ ಬೆಳೆಯಾದರೂ ಬೆದರುಬೊಂಬೆ ನಿಲ್ಲಿಸುವುದನ್ನು ತಪ್ಪಿಸುವುದಿಲ್ಲ.ಎಸ್.ಎನ್.ಕುಮಾರ ಸ್ವಾಮಿ, ಸೊಪ್ಪಿನಹಳ್ಳಿ ರೈತಕೃಷಿಯಲ್ಲಿ ಕಂಡು ಬರುವ ಬೆದರುಬೊಂಬೆ ಮೂಢನಂಬಿಕೆಯಲ್ಲ. ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ಸಂಸ್ಕೃತಿ.

260928-36-433205207

Dailyhunt
Disclaimer: This content has not been generated, created or edited by Dailyhunt. Publisher: Prajavani