Dailyhunt
ಹರಿಯಾಣ: ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್‌ ಲಸಿಕೆ ಕಳವು

ಹರಿಯಾಣ: ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್‌ ಲಸಿಕೆ ಕಳವು

ಚಂಡಿಗಡ: ಹರಿಯಾಣದ ಜಿಂದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್ ಲಸಿಕೆಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಳವು ಮಾಡಿರುವವರು ಆಸ್ಪತ್ರೆಯ ಸ್ಟೋರ್‌ ರೂಮ್‌ನಲ್ಲಿದ್ದ ಇತರ ಲಸಿಕೆ, ಔಷಧ, ಹಣವನ್ನು ಮುಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಮಿಕರೊಬ್ಬರು ಸ್ಟೋರ್‌ ರೂಮ್‌ ಮತ್ತು ರೆಫ್ರಿಜರೇಟರ್‌ ಬೀಗ ತೆಗೆದಾಗ ಈ ವಿಷಯ ಗೊತ್ತಾಯಿತು.

ವೈದ್ಯಕೀಯ ಆಮ್ಲಜನಕದ ಕೊರತೆ; ದೆಹಲಿಯಲ್ಲಿ ಸಣ್ಣ ಆಸ್ಪತ್ರೆಗಳ ಪರದಾಟ

ಆಸ್ಪತ್ರೆಯಿಂದ 1270 ಡೋಸ್‌ಗಳಷ್ಟು ಕೋವಿಶೀಲ್ಡ್‌ ಮತ್ತು 440 ಡೋಸ್‌ಗಳಷ್ಟು ಕೋವಾಕ್ಸಿನ್‌ ಲಸಿಕೆಗಳನ್ನು ಕಳವು ಮಾಡಲಾಗಿದೆ ಎಂದು ಸಿವಿಲ್ ಲೇನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಂದ್ರ ಸಿಂಗ್ ಮಾಹಿತಿ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani