Dailyhunt Logo
  • Light mode
    Follow system
    Dark mode
    • Play Story
    • App Story
ಹಟ್ಟಿ: ಚಿನ್ನ ಉತ್ಪಾದನೆ ಕುಸಿತ

ಹಟ್ಟಿ: ಚಿನ್ನ ಉತ್ಪಾದನೆ ಕುಸಿತ

ಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯು 2025ರ ಡಿಸೆಂಬರ್ ಅಂತ್ಯಕ್ಕೆ ಚಿನ್ನ ಉತ್ಪಾದನೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಗುರಿಗಿಂತ 285 ಕೆ.ಜಿ, 511 ಗ್ರಾಂ ಉತ್ಪಾದನೆಯ ಕೊರತೆ ಆಗಿರುವುದು ಕಂಪನಿ ಅಂಕಿ ಅಂಶಗಳಿಂದ ತಿಳಿದಿದೆ.

ಪ್ರಸಕ್ತ ಸಾಲಿನಲ್ಲಿ 1,187 ಕೆ.ಜಿ ಚಿನ್ನಉತ್ಪಾದಿಸುವ ಗುರಿಯಿತ್ತು.

ಆದರೆ 901 ಕೆ.ಜಿ, ಮಾತ್ರ ಉತ್ಪಾದಿಸಲಾಗಿದ್ದು, 285.5 ಕೆ.ಜಿ ಚಿನ್ನ ಉತ್ಪಾದನೆ ಕೊರತೆಯಾಗಿದೆ. 5.70 ಲಕ್ಷ ಟನ್ ಅದಿರು ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ 4.39 ಲಕ್ಷ ಟನ್ ಉತ್ಪಾದಿಸಲಾಗಿದ್ದು, 1.30 ಟನ್ ಅದಿರು ಉತ್ಪಾದನೆ ಕೊರತೆಯಾಗಿದೆ. ಇದು ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಆಗಿರುವುದು ಆಡಳಿತ ವೈಫಲ್ಯಕ್ಕೆ ಕನ್ನಡಿಯಾಗಿದೆ.

ನ್ಯೂ ಸರ್ಕ್ಯೂಲರ್ ಶಾಫ್ಟ್ ಗಣಿ ಆರಂಭಗೊಂಡರೆ ಪ್ರತಿದಿನ 3 ಸಾವಿರ ಟನ್ ಅದಿರು ಉತ್ಪಾದನೆ, ವಾರ್ಷಿಕ 3 ಟನ್‌ವರೆಗೆ ಚಿನ್ನ ಉತ್ಪಾದನೆಯಾಗಲಿದೆ ಎಂಬ ಮಾತನ್ನು ಗಣಿ ಆಡಳಿತ ಹಿಂದೆ ಹೇಳಿತ್ತು. ಈಗಾಗಲೇ ನ್ಯೂ ಸರ್ಕ್ಯೂಲರ್ ಶಾಫ್ಟ್ ಗಣಿ ಆರಂಭಗೊಂಡಿದೆ. ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಏನು ವ್ಯತ್ಯಾಸ ಕಾಣಿಸಿಲ್ಲ. ಇದರಿಂದ ಚಿನ್ನ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸಿದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗಣಿ ಆಡಳಿತವರ್ಗದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

-ಜಿ.ಟಿ. ಪಾಟೀಲ ಹಟ್ಟಿ ಚಿನ್ನದ ಗಣಿ ಕಂಪನಿ ನಿಗಮದ ಅಧ್ಯಕ್ಷಚಿನ್ನ ಉತ್ಪಾದನೆಯಲ್ಲಿ ಕಡಿಮೆಯಾಗಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
Dailyhunt
Disclaimer: This content has not been generated, created or edited by Dailyhunt. Publisher: Prajavani