Dailyhunt Logo
  • Light mode
    Follow system
    Dark mode
    • Play Story
    • App Story
ಹೆಬ್ರಿ ನಾಯರಕೋಡು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

ಹೆಬ್ರಿ ನಾಯರಕೋಡು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

ಹೆಬ್ರಿ: ಶಿವಪುರ ಗ್ರಾಮದ ನಾಯರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀನಿಧಿ ಫೌಂಡೇಶನ್ ಮತ್ತು ರಿಸರ್ಚ್ ಸೆಂಟರ್ ವತಿಯಿಂದ ದಿನೇಶ ಶೆಟ್ಟಿ ಖಜಾನೆ ಅವರು ನೀಡಿದ ನೋಟ್‌ಬುಕ್ ವಿತರಿಸಲಾಯಿತು.

ಮಕ್ಕಳಿಗೆ ವರ್ಷಕ್ಕೆ ಬೇಕಾಗುವಷ್ಟು ನೋಟ್ ಹಾಗೂ ಕಲಿಕಾ ಪರಿಕರಗಳನ್ನು ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೇಶವ ಆಚಾರ್ಯ, ವಿಶ್ವನಾಥ್ ನಾಯ್ಕ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ವಿಮಲಾ ಸ್ವಾಗತಿಸಿದರು. ಪ್ರೀತಿ ಎಂ ನಿರೂಪಿಸಿದರು. ಸುಶ್ಮಿತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-28-878389954

Dailyhunt
Disclaimer: This content has not been generated, created or edited by Dailyhunt. Publisher: Prajavani