ವಿವಾದಿತ ಅಥ್ಲೀಟ್ ಪಿಂಕಿ ಪ್ರಮಾಣಿಕ್ ಅವರ ಬಯೋಪಿಕ್ ಘೋಷಣೆಯಾಗಿದ್ದು ಈ ಸಿನಿಮಾವನ್ನು ನಿರ್ಮಾಪಕ ಅಶೋಕ್ ಪಂಡಿತ್ ನಿರ್ಮಾಣ ಮಾಡಲಿದ್ದಾರೆ.
ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಅವರು ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪಿಂಕಿ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿದ್ದರು.
ಪಿಂಕಿ ಅವರ ಜೀವನ ಕುರಿತು ಸಿನಿಮಾ ಮಾಡಲು ಅಶೋಕ್ ಪಂಡಿತ್ ಹಕ್ಕು ಖರೀದಿ ಮಾಡಿದ್ದಾರೆ. ಈ ಚಿತ್ರವನ್ನು ಪ್ರಿಯಾಂಕ ಘಟಕ್ ನಿರ್ದೇಶನ ಮಾಡುವುದು ಖಚಿವಾಗಿದೆ. ಈಗಾಗಲೇ ಪ್ರಿಯಾಂಕ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಪಿಂಕಿ ಪ್ರಮಾಣಿಕ್ ಹೆಣ್ಣಲ್ಲ, ಗಂಡು ಎಂದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದರು. ಈ ಸಂಬಂಧ ಪಿಂಕಿ ಬಂಧನವಾಗಿ ಜೈಲು ವಾಸ ಸಹ ಅನುಭವಿಸಿದ್ದರು. ಅವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿತ್ತು.

