ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಹೊರ್ಮುಜ್ ಬೆನ್ನಲ್ಲೇ ಮತ್ತೊಂದು ಜಲಸಂಧಿ ಬಂದ್ ಮಾಡಲು ಮುಂದಾದ ಇರಾನ್?
ಒಂದು ಸಾಲಿನಲ್ಲಿಹೊರ್ಮುಜ್ ಜಲಸಂಧಿಯ ಬೆನ್ನಲ್ಲೇ, ತೈಲ ಹಾಗೂ ಸರಕು ಸಾಗಣೆಯ ಪ್ರಮುಖ ಮಾರ್ಗವಾದ ಬಬ್-ಎಲ್-ಮಂಡೇಬ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆಯನ್ನು ಇರಾನ್ ನೀಡಿದೆ.
ಪ್ರಮುಖ ಅಂಶಗಳು• ಜಲಸಂಧಿಯ ಭೌಗೋಳಿಕ ಮಹತ್ವ32 ಕಿ.ಮೀ. ಅಗಲವಿರುವ ಬಬ್-ಎಲ್-ಮಂಡೇಬ್ ಜಲಸಂಧಿಯು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಆಯಕಟ್ಟಿನ ಜಲಮಾರ್ಗವಾಗಿದೆ.ಪ್ರಮುಖ ಅಂಕಿಅಂಶಗಳು32 ಕಿ.ಮೀ.ಬಬ್-ಎಲ್-ಮಂಡೇಬ್ ಜಲಸಂಧಿಯ ಅಗಲಫೆಬ್ರುವರಿ 28ಇರಾನ್-ಅಮೆರಿಕ ಜಂಟಿ ದಾಳಿಯ ದಿನಾಂಕ2023ಹೌತಿ ಬಂಡುಕೋರರ ದಾಳಿ ಪ್ರಾರಂಭವಾದ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಟೆಹರಾನ್: ಹೊರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಿರುವ ಇರಾನ್ ಇದೀಗ ಮತ್ತೊಂದು ಪ್ರಮುಖ ಜಲಮಾರ್ಗ 'ಬಬ್-ಎಲ್-ಮಂಡೇಬ್' ಸ್ಥಗಿತಗೊಳಿಸುವ ಬೆದರಿಕೆ ಹಾಕಿದೆ.
'ಬಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ತಡೆಯೊಡ್ಡಲಾಗುವುದು' ಎಂದು ಇರಾನ್‌ನ ಸ್ಪೀಕರ್ ಮೊಹಮ್ಮದ್ ಬಘೇರ್ ಖಾಲಿಬಪ್ ಎಚ್ಚರಿಕೆ ನೀಡಿದ್ದಾರೆ.
'ಜಾಗತಿಕ ತೈಲ, ಎಲ್‌ಎನ್‌ಜಿ, ಗೋಧಿ, ಅಕ್ಕಿ ಮತ್ತು ರಸಗೊಬ್ಬರ ಎಷ್ಟು ಪಾಲು ಬಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ? ಯಾವ ದೇಶದ ಯಾವ ಕಂಪನಿಗಳ ಸರಕುಗಳು ಈ ಜಲಸಂಧಿಯ ಮೂಲಕ ಸಾಗುತ್ತವೆ' ಎಂದು ಖಾಲಿಬಪ್ ಪ್ರಶ್ನಿಸಿದ್ದಾರೆ.
ಹೆಚ್ಚಿದ ಆತಂಕ....
ಹೊರ್ಮುಜ್ ಜಲಸಂಧಿಯಲ್ಲಿ ನಡೆಯುತ್ತಿರುವ ಅಡೆತಡೆಗಳ ನಡುವೆಯೇ ಇರಾನ್, ಜಾಗತಿಕ ಹಡಗು ಸಂಚಾರದ ಮತ್ತೊಂದು ಪ್ರಮುಖ ಮಾರ್ಗವಾದ ಬಬ್-ಎಲ್-ಮಂಡೇಬ್ ಜಲಸಂಧಿಯತ್ತ ತನ್ನ ಚಿತ್ತ ಹರಿಸಿದ್ದು, ಇದು ಜಾಗತಿಕ ಇಂಧನ ಮತ್ತು ಪೂರೈಕೆ ಸರಪಳಿ ಮೇಲೆ ದುಷ್ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಇದಕ್ಕೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ಹಡಗುಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ.
ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಮಾತನಾಡಿ, ಹೊರ್ಮುಜ್ ರೀತಿಯಲ್ಲೇ ಬಬ್-ಎಲ್-ಮಂಡೇಬ್ ಜಲಸಂಧಿ ಸ್ಥಗಿತಗೊಳಿಸುವ ಇರಾದೆ ಹೊಂದಿರುವುದಾಗಿ ಹೇಳಿದ್ದಾರೆ.
ವಿಶ್ವದ ಅತ್ಯಂತ ಪ್ರಮುಖ ತೈಲ ಕಾರಿಡಾರ್‌ಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮುಂದುವರಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಹಡಗು ಸಂಚಾರದ ಮೇಲೆ ಒತ್ತಡ ಹೆಚ್ಚಿಸಿದೆ ಮತ್ತು ವೆಚ್ಚ ಹೆಚ್ಚಾಗುವಂತೆ ಮಾಡಿದೆ.
ಬಬ್-ಎಲ್-ಮಂಡೇಬ್ ಜಲಸಂಧಿಯ ಸುತ್ತ...
ಬಬ್-ಎಲ್-ಮಂಡೇಬ್ ಜಲಸಂಧಿಯು 32 ಕಿ.ಮೀ. ಅಗಲ ಇದ್ದು, ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿ ಹಾಗೂ ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಜಲಮಾರ್ಗದ ಒಂದು ಬದಿಯಲ್ಲಿ ಯೆಮನ್ ದೇಶವಿದೆ.
ಇರಾನ್ ಬೆಂಬಲಿತ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್'ನ ಭಾಗವಾಗಿರುವ ಯೆಮನ್‌ನ 'ಹೂಥಿ' ಬಂಡುಕೋರರು, ಇತ್ತೀಚೆಗೆ ಬಬ್-ಎಲ್-ಮಂಡೇಬ್ ಜಲಸಂಧಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
2023ರ ಅಕ್ಟೋಬರ್‌ನಿಂದ ಗಾಜಾದ ಮೇಲೆ ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ, ಹುಥಿ ಬಂಡುಕೋರರು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಕ್ಷಿಪಣಿ, ಡ್ರೋನ್ ಮತ್ತು ಸ್ಫೋಟಕಗಳನ್ನು ಬಳಸಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದರು. ಈ ದಾಳಿಗಳು ಇಸ್ರೇಲ್‌ನೊಂದಿಗೆ ಸಂಪರ್ಕ ಹೊಂದಿದ ಹಡಗುಗಳ ಮೇಲೆ ಮಾತ್ರ ಎಂದು ಒತ್ತಿ ಹೇಳಿದ್ದರು.
ಅಮೆರಿಕ-ಇರಾನ್ ಸಂಘರ್ಷದ ಹೊಸ ಕೇಂದ್ರಬಿಂದು
ಬಬ್-ಎಲ್-ಮಂಡೇಬ್ ಜಲಸಂಧಿಯು ಅಮೆರಿಕ-ಇರಾನ್ ಸಂಘರ್ಷದ ಹೊಸ ಕೇಂದ್ರಬಿಂದುವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ವಿಶೇಷವಾಗಿ ಮಾರ್ಚ್ 28ರಂದು 'ಹೂಥಿ' ಬಂಡುಕೋರರು ಇಸ್ರೇಲ್ ಕಡೆಗೆ ಕ್ಷಿಪಣಿ ಉಡ್ಡಯನ ಮಾಡಿದ ನಂತರ ಈ ಆತಂಕ ಹೆಚ್ಚಾಗಿದೆ.
ಯೆಮನ್‌ನ ಆಯಕಟ್ಟಿನ ಪ್ರದೇಶವಾಗಿರುವ ಬಬ್-ಎಲ್-ಮಂಡೇಬ್ ಜಲಸಂಧಿಯು ಈ ಹಿಂದೆಯೂ ಇಂತಹ ಅಡೆತಡೆಗಳಿಗೆ ಕಾರಣವಾಗಿತ್ತು. 2023 ಮತ್ತು 2024ರ ಕೊನೆಯಲ್ಲಿ ಕೆಂಪು ಸಮುದ್ರದಲ್ಲಿ ಹೂಥಿಗಳು ನಡೆಸಿದ ದಾಳಿಗಳು ಜಾಗತಿಕ ಸಂಚಾರಕ್ಕೆ ಭಾರಿ ಅಡ್ಡಿ ಉಂಟುಮಾಡಿದ್ದವು. ಸದ್ಯಕ್ಕೆ ಹೂಥಿಗಳಿಂದ ಯಾವುದೇ ಅಧಿಕೃತ ದಿಗ್ಬಂಧನ ಇಲ್ಲದಿದ್ದರೂ, ಈ ಎರಡನೇ ಪ್ರಮುಖ ಜಲಸಂಧಿಯಲ್ಲಿ ಉಂಟಾಗುವ ಯಾವುದೇ ಅಡೆತಡೆಯು ಜಾಗತಿಕವಾಗಿ ವ್ಯಾಪಕ ಆರ್ಥಿಕ ಪರಿಣಾಮಗಳನ್ನು ಬೀರಬಹುದು ಎನ್ನುತ್ತಾರೆ ವಿಶ್ಲೇಷಕರು.

