Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್‌ ಜಲಸಂಧಿ: ಯುಎಇಯ ಹಡಗುಗಳ ಮೇಲೆ ದಾಳಿ

ಹೊರ್ಮುಜ್‌ ಜಲಸಂಧಿ: ಯುಎಇಯ ಹಡಗುಗಳ ಮೇಲೆ ದಾಳಿ

ದುಬೈ: 'ಸಂಯುಕ್ತ ಅರಬ್‌ ಒಕ್ಕೂಟದ (ಯುಎಇ) ತೈಲ ಕಂಪನಿಗೆ ಸೇರಿದ ಎರಡು ಹಡಗುಗಳು ಹೊರ್ಮುಜ್‌ ಜಲಸಂಧಿಯ ಮೂಲಕ ಸಾಗುತ್ತಿದ್ದ ವೇಳೆ ಇರಾನ್‌ ಡ್ರೋನ್‌ ದಾಳಿ ನಡೆಸಿದೆ' ಎಂದು ಯುಎಇ ಆರೋಪಿಸಿದೆ.

ದಾಳಿಯಿಂದ ಯಾವುದೇ ಗಾಯಗಳಾಗಿಲ್ಲ. ಆದರೆ, ನಿರ್ಣಾಯಕ ಜಲಮಾರ್ಗದ ಮೇಲೆ ಇರಾನ್‌ ತನ್ನ ಬಿಗಿಹಿಡಿತ ಮುಂದುವರಿಸಿರುವ ಕಾರಣ, ಹಡಗುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಅಬುಧಾಬಿಯಲ್ಲಿರುವ ಸರ್ಕಾರಿ ಸ್ವಾಮ್ಯದ ತೈಲ ಹಾಗೂ ಅನಿಲ ಕಂಪನಿ 'ಅಡ್‌ನಾಕ್‌' ಸಂಸ್ಥೆಯ ಎರಡು ಹಡಗುಗಳು ಹೊರ್ಮುಜ್‌ ಜಲಸಂಧಿಯ ಮೂಲಕ ಹಾದುಹೋಗುವ ವೇಳೆ ಎರಡು ಡ್ರೋನ್‌ಗಳ ಮೂಲಕ ಗುರುವಾರ ಸಂಜೆ ದಾಳಿ ನಡೆದಿದೆ. ದಾಳಿಯಿಂದ ಯಾವುದೇ ಗಾಯಗಳು ಉಂಟಾಗಿಲ್ಲ, ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಕಂಪನಿ ತಿಳಿಸಿದೆ.

'ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿರುವುದು ವಿಶ್ವಸಂಸ್ಥೆಯ ಮುಕ್ತ ನೌಕಾಯಾನ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಯುಎಇಯ ವಿದೇಶಾಂಗ ಸಚಿವಾಲಯವು ತಿಳಿಸಿದೆ.

'ಹೊರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ ಬೆದರಿಕೆ ತಂತ್ರ ಹಾಗೂ ಆರ್ಥಿಕ ದಬ್ಬಾಳಿಕೆ ನಡೆಸುತ್ತಿದ್ದು, ಕಡಲ್ಗತನಕ್ಕೆ ಸಮಾನವಾಗಿದೆ. ಈ ಪ್ರದೇಶದ ಸ್ಥಿರತೆ ಹಾಗೂ ಜಾಗತಿಕ ಇಂಧನ ಭದ್ರತೆಗೆ ನೇರ ಬೆದರಿಕೆಯಾಗಿದೆ' ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಈ ಕುರಿತಂತೆ ಇರಾನ್‌ನ ವಿದೇಶಾಂಗ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 ಜಾರೆಡ್‌ ಕಶ್ನರ್‌

ಗಾಜಾ ಕದನ ವಿರಾಮ: ಭಾನುವಾರ ಮಾತುಕತೆ

ಗಾಜಾದಲ್ಲಿ ಯುದ್ಧ ಕೊನೆಗೊಳಿಸಿ ಕದನ ವಿರಾಮದ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಳಿಯ ಹಾಗೂ ಶ್ವೇತಭವನದ ಸಲಹೆಗಾರ ಜಾರೆಡ್‌ ಕಶ್ನರ್‌ ಮುಂದಿನ ವಾರ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ದುರ್ಬಲವಾದ ಕದನ ವಿರಾಮ ಏರ್ಪಟ್ಟ ಬಳಿಕ ಟ್ರಂಪ್‌ ಅವರು ಉನ್ನತ ಮಟ್ಟದ ತಂಡವನ್ನು ರಚಿಸಿದ್ದಾರೆ. ಇದರಲ್ಲಿ ನಿಕೋಲೆ ಮ್ಲಡೆನೊವ್‌ ಕಾರ್ಯಕಾರಿ ಬೋರ್ಡ್‌ ಸದಸ್ಯ ಹಾಗೂ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಕೂಡ ಇದ್ದು ಭಾನುವಾರ ಇಸ್ರೇಲ್‌ಗೆ ಬಂದಿಳಿಯಲಿದ್ದಾರೆ. ಇದಾದ ಬಳಿಕ ಈ ತಂಡವು ಕೈರೊಗೆ ಬೆಳೆಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani