Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಆರಂಭ: ಟ್ರಂಪ್

ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಆರಂಭ: ಟ್ರಂಪ್

ವಾಷಿಂಗ್ಟನ್: 107 ದಿನಗಳ ಯುದ್ಧ ಅಂತ್ಯಕ್ಕೆ ಅಮೆರಿಕ ಮತ್ತು ಇರಾನ್ ಡಿಜಿಟಲ್ ಸಹಿ ಮಾಡಿದ ಬಳಿಕ ತೈಲ ಟ್ಯಾಂಕರ್‌ಗಳಿರುವ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಂಚಾರ ಆರಂಭಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯ ದಕ್ಷಿಣದ ಮಾರ್ಗದ ಮೂಲಕ ಹಡಗುಗಳು ಹೋಗುತ್ತಿವೆ ಎಂದು ಅವೆರು ಹೇಳಿದ್ದಾರೆ.

'ತೈಲ ತುಂಬಿದ ಹಡಗುಗಳು ಹೊರ್ಮುಜ್ ಜಲಸಂಧಿಯಿಂದ ಚಲಿಸಲು ಪ್ರಾರಂಭಿಸಿವೆ. ಅವು ದಕ್ಷಿಣದ ಮಾರ್ಗದಲ್ಲಿ ಹೋಗುತ್ತಿವೆ. ಇದು ಸಂಪೂರ್ಣ ಸುರಕ್ಷಿತ ಮತ್ತು ಪ್ರಾಚೀನ ಮಾರ್ಗವಾಗಿದೆ' ಎಂದಿದ್ದಾರೆ.

ಇರಾನ್‌ನೊಂದಿಗೆ ಮಾಡಿಕೊಂಡ ಒಪ್ಪಂದವು ಹೊರ್ಮುಜ್ ಜಲಸಂಧಿಯನ್ನು ಶಾಶ್ವತವಾಗಿ ಟೋಲ್ ಫ್ರೀ ಎಂದು ಖಚಿತಪಡಿಸುತ್ತದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಜೊತೆ ಇರಾನ್ ಪರಮಾಣು ಕುರಿತಾದ ಒಪ್ಪಂದಕ್ಕೆ ಬರಲು ವಿಫಲವಾದರೆ, ಇರಾನ್ ಮೇಲೆ ಮತ್ತೆ ಮಿಲಿಟರಿ ದಾಳಿಯನ್ನು ಪುನರಾರಂಭಿಸುತ್ತೇನೆ ಅಥವಾ ಅಮೆರಿಕ ಪಶ್ಚಿಮ ಏಷ್ಯಾದ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಇದೇ 19ರಂದು ಇರಾನ್ ಮತ್ತು ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇರಾನ್ ಬಂದರುಗಳಿಗೆ ಬರುವ ಮತ್ತು ಅಲ್ಲಿಂದ ಹೊರಡುವ ಹಡಗುಗಳಿಗೆ ಅಮೆರಿಕದ ದಿಗ್ಬಂಧನ ತೆಗೆದುಹಾಕಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani