Dailyhunt
ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ4, ವಿ4-ಎಸ್‌ ಬಿಡುಗಡೆ: ಏನಿದರ ವಿಶೇಷತೆ?

ಹೊಸ ಡುಕಾಟಿ ಸ್ಟ್ರೀಟ್‌ಫೈಟರ್ ವಿ4, ವಿ4-ಎಸ್‌ ಬಿಡುಗಡೆ: ಏನಿದರ ವಿಶೇಷತೆ?

ನವದೆಹಲಿ: ಸೂಪರ್‌ ಬೈಕ್‌ ತಯಾರಿಸುವ ಇಟಲಿಯ ಡುಕಾಟಿ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಸ್ಟ್ರೀಟ್‌ಫೈಟರ್‌ ವಿ4 ಮತ್ತು ವಿ4 ಎಸ್ ಮಾದರಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 19.99 ಲಕ್ಷ ಮತ್ತು ₹ 22.99 ಲಕ್ಷ ಇದೆ (ದೆಹಲಿ ಎಕ್ಸ್‌ಷೋರೂಂನಂತೆ).

ಎರಡೂ ಮಾದರಿಗಳು ಬಿಎಸ್‌6 ಮಾನದಂಡಕ್ಕೆ ಪೂರಕವಾದ ಎಂಜಿನ್‌ಗಳನ್ನು ಹೊಂದಿವೆ.

ಬೆಂಗಳೂರು, ದೆಹಲಿ-ಎನ್‌ಸಿಆರ್‌, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತ ಮತ್ತು ಚೆನ್ನೈನ ಕಂಪನಿಯ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್‌ ಆರಂಭವಾಗಿದೆ. ಲಾಕ್‌ಡೌನ್‌ ನಿರ್ಬಂಧಗಳು ತೆರವಾಗುತ್ತಿದ್ದಂತೆಯೇ ಗ್ರಾಹಕರಿಗೆ ಬೈಕ್‌ ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani