Dailyhunt Logo
  • Light mode
    Follow system
    Dark mode
    • Play Story
    • App Story
ಹೊಸ ಪ್ರತಿಭೆಗಳಿಗೆ, ಕಥೆಗಾರರಿಗೆ ಪ್ರಿಯಾ ಸುದೀಪ್ ಕಡೆಯಿಂದ ಸುವರ್ಣ ಅವಕಾಶ

ಹೊಸ ಪ್ರತಿಭೆಗಳಿಗೆ, ಕಥೆಗಾರರಿಗೆ ಪ್ರಿಯಾ ಸುದೀಪ್ ಕಡೆಯಿಂದ ಸುವರ್ಣ ಅವಕಾಶ

ಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಮತ್ತು ಕಥೆಗಾರರಿಗೆ ಸುವರ್ಣ ಅವಕಾಶವನ್ನು ನೀಡುತ್ತಿದ್ದಾರೆ. 'ನಿಮ್ಮ ಬಳಿ ಮುಂದಿನ ದೊಡ್ಡ ಸಿನಿಮಾವಾಗುವ ಕಥೆಯಿದೆಯೇ? ನಮ್ಮ ಮುಂದಿನ ಸಿನಿಮಾಗಾಗಿ ಅಧಿಕೃತವಾಗಿ ಆಹ್ವಾನಿಸುತ್ತಿದ್ದೇವೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರಿಯಾ ಅವರು 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಕಥೆಗಾರರೇ... ನಿಮ್ಮ ಕಥೆಗೆ ಇದು ವೇದಿಕೆ.

'ಮೌಲಿಕ ಕಥಾಸಂಕಲನಗಳು, ಹೊಸ ಚಿಂತನೆಗಳು ಮತ್ತು ಪ್ರಬಲ ಧ್ವನಿಗಳು. ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು, ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು. ನಿಮ್ಮ ಬಳಿ ಮೌಲಿಕ ಕಥೆ, ಚಿತ್ರಕಥೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು' ಎಂದು ಸಂಸ್ಥೆಯು ಬರೆದುಕೊಂಡಿದೆ.

ಕಥೆ ಸಲ್ಲಿಸುವುದು ಹೇಗೆ?

ನಿಮ್ಮ ಬಳಿ ಉತ್ತಮ ಕಥೆಗಳಿದ್ದರೆ, ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯು ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ನೀಡಿದೆ. 6363307434 ಇದಕ್ಕೆ ವಾಟ್ಸಾಪ್ ಮಾಡಬೇಕು.

ಇತ್ತೀಚೆಗಷ್ಟೇ ತಮ್ಮ ಅಳಿಯ ಸಂಚಿತ್ ಸಂಜೀವ್ ನಟಿಸಿದ್ದ 'ಮ್ಯಾಂಗೋ ಪಚ್ಚ' ಸಿನಿಮಾವನ್ನು ನಿರ್ಮಾಣ ಮಾಡಿದ ಪ್ರಿಯಾ ಸುದೀಪ್ ಅವರು ಎಲ್ಲರಿಂದ ಮೆಚ್ಚುಗೆ ಗಳಿಸಿದ್ದರು. ಆ ಬೆನ್ನಲ್ಲೇ ಈಗ ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಮತ್ತು ಕಥೆಗಾರರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಕಲ್ಪಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani