ನವದೆಹಲಿ: 'ಇಂದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ 'ವಂದೇ ಮಾತರಂ'ಧ್ವನಿ ಅನುರಣಿಸುತ್ತಿದೆ. ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ, ಪ್ರತಿ ಮನದಲ್ಲೂ ತ್ರಿವರ್ಣವೇ ನೆಲೆಸಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಶುಭ ಸಂದರ್ಭದಲ್ಲಿ ನಾನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೇರಿದಂತೆ ದೇಶಕ್ಕಾಗಿ ತ್ಯಾಗ ಬಲಿದಾನ ನೀಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
'ನಾವಿಂದು ಅತ್ಯಂತ ಸಂಭ್ರಮದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇಂದು ದೇಶದ ಮೂಲೆ ಮೂಲೆಯಲ್ಲೂ 'ವಂದೇ ಮಾತರಂ' ಜಯಘೋಷ ಮೊಳಗುತ್ತಿದೆ. ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ರಾರಾಜಿಸುತ್ತಿದ್ದು, ಪ್ರತಿಯೊಬ್ಬರ ಮನದಲ್ಲೂ ತ್ರಿವರ್ಣ ಪ್ರೇಮ ಮನೆಮಾಡಿದೆ. ನಾವು ಹೊಸ ಸಂಕಲ್ಪ ತೊಟ್ಟು, ಅಪಾರ ಉತ್ಸಾಹದೊಂದಿಗೆ ಮುನ್ನಡೆಯೋಣ' ಎಂದು ಪ್ರಧಾನಿ ಹೇಳಿದರು.

