ನಟಿ ಸಂಗೀತಾ ಶೃಂಗೇರಿ ಅವರು 'ಪದ್ಮನಾಭ & ಫ್ಯಾಮಿಲಿ' ಚಿತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

'ಪದ್ಮನಾಭ & ಫ್ಯಾಮಿಲಿ' ಚಿತ್ರತಂಡ ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಮೂಹೂರ್ತ ನೆರವೇರಿಸಿದೆ.

ಈ ಚಿತ್ರದ ಮೂಹೂರ್ತದ ಫೋಟೊಗಳನ್ನು ನಟಿ ಸಂಗೀತಾ ಶೃಂಗೇರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಸ್ಮಾಯಿಲ್ ಅವರ ನಿರ್ದೇಶನದ 'ಪದ್ಮನಾಭ & ಫ್ಯಾಮಿಲಿ' ಚಿತ್ರವನ್ನುನವದುರ್ಗ ಬ್ಯಾನರ್ ನಿರ್ಮಾಣ ಮಾಡಲಿದೆ.

ಈ ಚಿತ್ರದಲ್ಲಿ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ರಿಧನ್ ಶೆಟ್ಟಿ, 'ಕಾಂತಾರ'ದ ಮಾನ್ಸಿ ಸುಧೀರ್ ಸೇರಿ ಅನೇಕರು ನಟಿಸುತ್ತಿದ್ದಾರೆ.
ಸಂಗೀತಾ ಶೃಂಗೇರಿ ಅವರು 'ಚಾರ್ಲಿ 777' ಚಿತ್ರದ ಮೂಲಕ ಗಮನ ಸೆಳೆದಿದ್ದರು.
ಸಂಗೀತಾ ಶೃಂಗೇರಿ ಅವರು ಬಿಗ್‌ಬಾಸ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಖ್ಯಾತಿ ಗಳಿಸಿದ್ದರು. ಬಿಗ್‌ಬಾಸ್ ಬಳಿಕ ಮೊದಲ ಚಿತ್ರವನ್ನು ಘೋಷಣೆ ಮಾಡಿದ್ದಾರೆ.

