ಹೊಸಕೋಟೆ: ನಗರದ ಸಮೀಪದ ಹೊಸಕೋಟೆ ಡೇರಿ ಆವರಣದಲ್ಲಿ ಸಹಕಾರ ಸಪ್ತಾಹ ಅಂಗವಾಗಿ ಶುಕ್ರವಾರ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಎಂವಿಜೆ ಆಸ್ಪತ್ರೆ ಸಹಯೋಗದೊಂದಿಗೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಹೊಸಕೋಟೆ ಡೇರಿ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹಾಲು ಉತ್ಪಾದಕರ ಸಿಬ್ಬಂದಿಗೆ ರಕ್ತದೊತ್ತಡ, ಮಧುಮೇಹ, ಕಿವಿ, ಮೂಗು, ಕಣ್ಣು ತಪಾಸಣೆ ಮಾಡಲಾಯಿತು. ನಂತರ ಡೇರಿ ಆವರಣದಲ್ಲಿ ಸಸಿ ನೆಡಲಾಯಿತು. ಬಳಿಕ ಜೋಳ ವಿತರಣೆ ಮಾಡಲಾಯಿತು.
ಬಮುಲ್ ನಿರ್ದೇಶಕ ಸತೀಶ್ ಗೌಡ, ಎಂವಿಜೆ ವೈದ್ಯಕೀಯ ಕಾಲೇಜಿನ ವೈದ್ಯ ಪ್ರಮೋದ್, ಸಹಕಾರ ಒಕ್ಕೂಟ ನಿರ್ದೇಶಕ ಮಾಕನಹಳ್ಳಿ ರಮೇಶ್, ಹೊಸಕೋಟೆ ಡೇರಿ ವ್ಯವಸ್ಥಾಪಕ ಮಧುಸೂಧನ್, ಕಚೇರಿ ಮುಖ್ಯಸ್ಥ ಜಿ.ವಿನಯ್ ಕುಮಾರ್, ಪಶು ವೈದ್ಯಕೀಯ ಮುಖ್ಯಸ್ಥ ಸಂತೋಷ್, ವಿಸ್ತರಣಾಧಿಕಾರಿ ರಮೇಶ್, ಆನಂದ್, ಪವಿತ್ರ, ವಿದ್ಯಾಶ್ರೀ, ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-15-724972913

