Dailyhunt Logo
  • Light mode
    Follow system
    Dark mode
    • Play Story
    • App Story
ಹುಳಿಯಾರು: ನವರಾತ್ರಿ ಸಂಭ್ರಮಕ್ಕೆ 'ಬೊಂಬೆ' ಕೂರಿಸುವ ಸಂಪ್ರದಾಯ

ಹುಳಿಯಾರು: ನವರಾತ್ರಿ ಸಂಭ್ರಮಕ್ಕೆ 'ಬೊಂಬೆ' ಕೂರಿಸುವ ಸಂಪ್ರದಾಯ

ಹುಳಿಯಾರು: ನಾಡಿನಲ್ಲಿ ಶರನ್ನವರಾತ್ರಿ ಸಂಭ್ರಮ ಗರಿಗೆದರಿದೆ. ನವರಾತ್ರಿ ಆಚರಣೆ ಜೊತೆಗೆ ಮನೆ ಮನೆಗಳಲ್ಲಿ 'ಬೊಂಬೆ ಕೂರಿಸುವ' ಪಾರಂಪರಿಕ ಶ್ರದ್ಧೆ ಹಾಗೂ ಸಡಗರ ಕಳೆಗಟ್ಟಿದೆ.

ಪಟ್ಟಣದ ವಾಸವಿ ಶಾಲೆಯ ಪಕ್ಕದಲ್ಲಿರುವ ನಾಗಲಕ್ಷ್ಮಿ ನರೇಂದ್ರಬಾಬು ಮನೆಯಲ್ಲಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿ ನವರಾತ್ರಿ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ದೇವರ ಮೂರ್ತಿ, ಪೌರಾಣಿಕ ಪಾತ್ರ, ಸಂತರ ವಿಗ್ರಹ, ಗ್ರಾಮೀಣ ಬದುಕನ್ನು ಬಿಂಬಿಸುವ ಗೊಂಬೆ, ಅಡುಗೆ ಮನೆಯ ಪರಿಕರ ಹಾಗೂ ವಿವಿಧ ಆಕರ್ಷಕ ಕಲಾಕೃತಿಗಳನ್ನು ಹಂತ ಹಂತವಾಗಿ ಜೋಡಿಸಿ ಪ್ರದರ್ಶಿಸಲಾಗಿದೆ. ಬಣ್ಣಬಣ್ಣದ ಗೊಂಬೆಗಳು ಮತ್ತು ವಿದ್ಯುತ್ ದೀಪಗಳ ಅಲಂಕಾರ ಮನೆಯಲ್ಲೊಂದು ಪುಟ್ಟ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿದೆ.

ನವರಾತ್ರಿ ಬೊಂಬೆ ಪ್ರದರ್ಶನದಲ್ಲಿ ಚಂದನದಿಂದ ಕೆತ್ತಿದ ಸಾಂಪ್ರದಾಯಿಕ ಶೈಲಿಯ 'ಪಟ್ಟದ ಬೊಂಬೆ'ಗೆ (ಗಂಡು- ಹೆಣ್ಣಿನ ಜೋಡಿ) ಪ್ರಥಮ ಪ್ರಾಶಸ್ತ್ಯ. ಶ್ರೀನಿವಾಸ-ಪದ್ಮಾವತಿ ಪ್ರತೀಕವೆಂದು ಭಾವಿಸಲಾಗುವ ಈ ಬೊಂಬೆಗೆ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ಶೃಂಗರಿಸುವುದು ಕಲಾತ್ಮಕವಾದ ಕೆಲಸ. ಮದುವೆಯ ಸಮಯದಲ್ಲಿ ತಾಯಿ ಮನೆಯಿಂದ ನೀಡಲಾಗುವ ಈ ಬೊಂಬೆ ಸುಖ ದಾಂಪತ್ಯದ ಸಂಕೇತ ಎನ್ನುತ್ತಾರೆ ನಾಗಲಕ್ಷ್ಮಿ.

ಬೊಂಬೆ ಜೋಡಿಸುವುದು ಅಲಂಕಾರದ ಕೆಲಸವಲ್ಲ. ವರ್ಷಪೂರ್ತಿ ಜೋಪಾನವಾಗಿ ಕಾಪಾಡಿಟ್ಟ ಗೊಂಬೆಗಳನ್ನು ಹೊರತೆಗೆದು, ಸ್ವಚ್ಛಗೊಳಿಸಿ, ಅವುಗಳ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಜೋಡಿಸಲು ಸಾಕಷ್ಟು ಸಮಯ, ತಾಳ್ಮೆ ಹಾಗೂ ಸೃಜನಶೀಲತೆ ಅಗತ್ಯ. ನಾಗಲಕ್ಷ್ಮಿ ಮನೆಯಲ್ಲಿಯೂ ಮೂರು ದಿನ ಗೊಂಬೆಗಳನ್ನು ಜೋಡಿಸುವ ಕಾರ್ಯ ನಡೆದಿದ್ದು, ಸಾಂಪ್ರದಾಯಿಕ ಗೊಂಬೆಗಳ ಜೊತೆಗೆ ವಿವಿಧ ಕಲಾಕೃತಿಗಳು ಪ್ರದರ್ಶನಕ್ಕೆ ಮೆರುಗು ನೀಡಿವೆ.

ನಾಗಲಕ್ಷ್ಮಿ ನರೇಂದ್ರಬಾಬುಅತ್ತೆ ಕಾಲದಿಂದಲೂ ಬೊಂಬೆ ಕೂರಿಸುವ ಸಂಪ್ರದಾಯವಿದೆ. ಇದನ್ನು ಮುಂದುವರಿಸದಿದ್ದರೆ ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆ ಮರೆತುಬಿಡುತ್ತಾರೆ

261012-17-1918679351

Dailyhunt
Disclaimer: This content has not been generated, created or edited by Dailyhunt. Publisher: Prajavani