Dailyhunt Logo
  • Light mode
    Follow system
    Dark mode
    • Play Story
    • App Story
ಇಡಿಯಟ್ ಚಿತ್ರದ ಫಸ್ಟ್‌ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್

ಇಡಿಯಟ್ ಚಿತ್ರದ ಫಸ್ಟ್‌ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್

'ಇಡಿಯಟ್' ಚಿತ್ರದ ಫಸ್ಟ್‌ಲುಕ್ ಹಂಚಿಕೊಂಡು ಪತ್ನಿ ರಕ್ಷಿತಾ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರೇಮ್ ಅವರು ಶುಭಕೋರಿದ್ದಾರೆ.

'ಇಡಿಯಟ್' ಫಿನಿಕ್ಸ್‌ಪ್ರೇಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದೆ. ಈ ಚಿತ್ರದ ಪೋಸ್ಟರ್ ಮೂಲಕ ರಕ್ಷಿತಾ ಅವರ ಜನ್ಮದಿನಕ್ಕೆ ಪತಿ ಪ್ರೇಮ್ ಹಾಗೂ ಸಹೋದರ ರಾಣಾ ಅವರು ಶುಭಹಾರೈಸಿದ್ದಾರೆ.

ಕುಟುಂಬ ಆಪ್ತರ ಸಮ್ಮುಖದಲ್ಲಿ ರಕ್ಷಿತಾ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶಿವರಾಜ್ ಕೆ. ಆರ್ ಪೇಟೆ, ಆನಂದ್ ಆಡಿಯೊ ಸೇರಿ ಅನೇಕರು ಶುಭಕೋರಿದ್ದಾರೆ.

'ಅಪ್ಪು' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಕ್ಷಿತಾ ಅವರು, 'ಸುಂಟರಗಾಳಿ', 'ಕಲಾಸಿಪಾಳ್ಯ' ಸಿನಿಮಾ, 'ಅಯ್ಯ', 'ಮಂಡ್ಯ', 'ಹುಬ್ಬಳಿ', 'ಕಾಶಿ' ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ, ನಟನೆಯಿಂದ ದೂರ ಉಳಿದಿರುವ ರಕ್ಷಿತಾ ಅವರು ಚಿತ್ರದ ನಿರ್ಮಾಪಕಿ ಹಾಗೂ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ‌ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani