ನವದೆಹಲಿ: ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಪ್ರತಿ ಕೆ.ಜಿಗೆ ಮತ್ತೆ ₹1ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಶನಿವಾರದಿಂದಲೇ ಜಾರಿಗೆ ಬಂದಿದೆ.
ಇದು ಎರಡು ವಾರದ ಅವಧಿಯಲ್ಲಿ ಮೂರನೇ ಬಾರಿ ಬೆಲೆ ಏರಿಕೆಯಾಗಿದೆ. ಕಳೆದ ವಾರವಷ್ಟೇ ಬೆಲೆಯನ್ನು ಕೆ.ಜಿಗೆ ₹3ರಷ್ಟು ಹೆಚ್ಚಿಸಲಾಗಿತ್ತು.
ದೆಹಲಿಯಲ್ಲಿ ಪ್ರಸ್ತುತ ಸಿಎನ್‌ಜಿ ದರ ಕೆ.ಜಿ.ಗೆ ₹81.09 ಆಗಿದೆ.
ಪೆಟ್ರೋಲ್, ಡೀಸೆಲ್ ದರವೂ ಏರಿಕೆ
ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ದರ ಹೆಚ್ಚಿಸಿದಂತಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಕಂಡಿದೆ. ಉತ್ಪಾದನಾ ವೆಚ್ಚ ಏರಿಕೆಯಿಂದ ಸರ್ಕಾರಿ ತೈಲ ಕಂಪನಿಗಳು ನಷ್ಟ ಅನುಭವಿಸುತ್ತಿರುವ ಕಾರಣ ದರ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿಯಾಗಿದೆ.
10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ: ಇಲ್ಲಿದೆ ಸಂಪೂರ್ಣ ವಿವರ
