ಲಖನೌ: ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ವೇಳೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂಬ ಸಂದೇಶ ರವಾನಿಸಲು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ನಿರ್ಧರಿಸಿದ್ದಾರೆ.
ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿಚಾರವಾಗಿ ಕಾರ್ಯತಂತ್ರ ರೂಪಿಸುವ ಸಲುವಾಗಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಸೆಪ್ಟೆಂಬರ್ 30ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಯಲ್ಲಿ ತೊಡಗಿಕೊಂಡಿರುವುದರಿಂದ ಇಂಡಿಯಾ ಸಭೆಗೆ ಬರಲಾಗುತ್ತಿಲ್ಲ ಎಂದು ಕಾರಣ ನೀಡಿರುವ ಅಖಿಲೇಶ್, ತಮ್ಮ ಬದಲು ಪಕ್ಷದ ಹಿರಿಯ ನಾಯಕರನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದು ಎಸ್‌ಪಿ ಮೂಲಗಳು ಮಾಹಿತಿ ನೀಡಿವೆ.
ರಾಜ್ಯಸಭೆ ಚುನಾವಣೆಯ ಕಾರಣ ತಿಳಿಸಲಾಗಿದೆಯಾದರೂ, ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆಯನ್ನು ವಿಳಂಬ ಮಾಡುವುದು ಅಖಿಲೇಶ್ ಲೆಕ್ಕಾಚಾರ ಎನ್ನಲಾಗಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇಂಡಿಯಾ ಮೈತ್ರಿಕೂಟದ ಸಭೆಗೆ ಅಖಿಲೇಶ್ ಯಾದವ್ ಗೈರು: ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ!
ಒಂದು ಸಾಲಿನಲ್ಲಿಇಂಡಿಯಾ ಮೈತ್ರಿಕೂಟದ ಸಭೆಗೆ ಅಖಿಲೇಶ್ ಯಾದವ್ ಗೈರು ಹಾಜರಾಗುವ ಮೂಲಕ, ಸೀಟು ಹಂಚಿಕೆಯ ವಿಷಯದಲ್ಲಿ ಕಾಂಗ್ರೆಸ್‌ನ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಏನು? ಏಕೆ? ಹೇಗೆ?
ಅಖಿಲೇಶ್ ಯಾದವ್ ಇಂಡಿಯಾ ಮೈತ್ರಿಕೂಟದ ಸಭೆಗೆ ಏಕೆ ಹೋಗುತ್ತಿಲ್ಲ?
ಉತ್ತರ ಪ್ರದೇಶದ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಈ ನಡೆಗೆ ನಿಜವಾದ ಕಾರಣವೇನು?
ರಾಜ್ಯಸಭಾ ಚುನಾವಣೆಯನ್ನು ಕಾರಣವನ್ನಾಗಿ ನೀಡಿದ್ದರೂ, ವಾಸ್ತವದಲ್ಲಿ ಕಾಂಗ್ರೆಸ್‌ನ ಸೀಟು ಹಂಚಿಕೆ ಒತ್ತಡಕ್ಕೆ ಮಣಿಯಬಾರದು ಎಂಬುದು ಅಖಿಲೇಶ್ ಅವರ ಲೆಕ್ಕಾಚಾರವಾಗಿದೆ.
ಸೀಟು ಹಂಚಿಕೆಯ ಬಗ್ಗೆ ಎಸ್‌ಪಿ ನಿಲುವು ಏನು?
ಕೇವಲ ಸಂಖ್ಯೆಯ ಆಧಾರದ ಮೇಲೆ ಸೀಟು ಹಂಚಿಕೆ ಮಾಡಬಾರದು, ಬದಲಾಗಿ ಅಭ್ಯರ್ಥಿಯ ಗೆಲುವಿನ ಸಾಧ್ಯತೆ ಮತ್ತು ಸ್ಥಳೀಯ ವಾತಾವರಣವನ್ನು ಪರಿಗಣಿಸಬೇಕು ಎಂದು ಎಸ್‌ಪಿ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಮೈತ್ರಿಕೂಟದಲ್ಲಿ ಬಿಎಸ್‌ಪಿಯನ್ನು ಸೇರಿಸಲು ಪ್ರಯತ್ನಿಸಿತೇ?
ಹೌದು, ಉತ್ತರ ಪ್ರದೇಶದಲ್ಲಿ ತಮಗೆ ಹೆಚ್ಚಿನ ಆಯ್ಕೆಗಳಿವೆ ಎಂಬುದನ್ನು ತೋರಿಸಲು ಕಾಂಗ್ರೆಸ್ ಬಹುಜನ ಸಮಾಜವಾದಿ ಪಕ್ಷಕ್ಕೆ (ಬಿಎಸ್‌ಪಿ) ಆಹ್ವಾನ ನೀಡಿತ್ತು, ಆದರೆ ಆ ಪ್ರಯತ್ನ ಯಶಸ್ವಿಯಾಗಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟದ ಪ್ರದರ್ಶನ ಹೇಗಿತ್ತು?
2024ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿ 80 ಸ್ಥಾನಗಳ ಪೈಕಿ 44 ಸ್ಥಾನಗಳನ್ನು ಗೆದ್ದು ಬಿಜೆಪಿಯ ಬಲವನ್ನು 33 ಸ್ಥಾನಗಳಿಗೆ ತಗ್ಗಿಸಿದ್ದವು.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು 2027ರ ಆರಂಭದಲ್ಲೇ ನಡೆಯಲಿದೆ. ಹೀಗಾಗಿ, ಸಾಧ್ಯವಾದಷ್ಟು ಬೇಗನೆ ಸೀಟು ಹಂಚಿಕೆ ಅಂತಿಮಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಡ ಹೇರುತ್ತಿದೆ. ಒಪ್ಪಂದವು ಗೌರವಯುತವಾಗಿ ಇರಬೇಕು ಇಲ್ಲವೇ, ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿಯೂ ಕಾಂಗ್ರೆಸ್ ಸುಳಿವು ನೀಡಿದೆ. ಆದರೆ, ಇಂತಹ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂಬ ಸಂದೇಶವನ್ನು ಎಸ್‌ಪಿ ರವಾನಿಸಿದೆ.
ಸೀಟು ಹಂಚಿಕೆಯು ಎಷ್ಟು ಸ್ಥಾನಗಳು ಇವೆ ಎಂಬ ಸಂಖ್ಯೆಯ ಮೇಲಲ್ಲ; ಯಾವ ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಪೂರಕವಾದ ವಾತಾವರಣ ಇದೆ ಎಂಬುದರ ಆಧಾರದ ಮೇಲೆ ಆಗಬೇಕು ಎಂದು ಅಖಿಲೇಶ್ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದಾರೆ. 'ಕಾಂಗ್ರೆಸ್ ಪಕ್ಷವು ಹೆಚ್ಚಿನ ಸೀಟುಗಳನ್ನು ನಿರೀಕ್ಷಿಸಬಾರದು. ಗೆಲುವಿನ ಸಾಧ್ಯತೆ ನೋಡಿ ಸ್ಥಾನಗಳನ್ನು ನೀಡಲಾಗುತ್ತದೆ ಎಂಬುದು ಅದರ ಅರ್ಥ' ಎಂದು ಎಸ್‌ಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮೋದಿಯ ವಾರಾಣಸಿ ಚುನಾವಣಾ ಫಲಿತಾಂಶ ರದ್ದು ಮಾಡುವಂತೆ ಕಾಂಗ್ರೆಸ್ ಕೂಗು: ಕಾರಣವೇನು?UP Poll: ಮೈತ್ರಿಕೂಟದಲ್ಲೇ ಮುಸುಕಿನ ಗುದ್ದಾಟ, ಕಾಂಗ್ರೆಸ್ vs ಎಸ್‌ಪಿ ಹಣಾಹಣಿ'ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಸಂಘಟನಾತ್ಮಕ ಬಲವಿಲ್ಲ. ಹಾಗಾಗಿ, ತನ್ನ ಸಾಮರ್ಥ್ಯ ಅಪಾರವಾದದ್ದು ಎಂಬ ಕಲ್ಪನೆ ಇಟ್ಟುಕೊಳ್ಳಬಾರದು' ಎಂದೂ ಸಲಹೆ ನೀಡಿದ್ದಾರೆ.
ಬಿಎಸ್‌ಪಿಗೂ ಆಹ್ವಾನ
ಎಸ್‌ಪಿಯಿಂದ ಸೀಟು ಹಂಚಿಕೆ ವಿಚಾರವಾಗಿ ಇಂತಹ ಪರಿಸ್ಥಿತಿ ಎದುರಾಗಬಹುದು ಎಂಬುದನ್ನು ಕಾಂಗ್ರೆಸ್ ಮೊದಲೇ ಅಂದಾಜಿಸಿತ್ತು. ಹಾಗಾಗಿ, ಉತ್ತರ ಪ್ರದೇಶದಲ್ಲಿ ತಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ ಎಂಬುದನ್ನು ತೋರಿಸಲು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷಕ್ಕೆ ಇಂಡಿಯಾ ಮೈತ್ರಿಕೂಟ ಸೇರುವಂತೆ ಆಹ್ವಾನ ನೀಡಿತ್ತು. ಆದರೆ, ಆ ಪ್ರಯತ್ನ ಯಶಸ್ವಿಯಾಗಿಲ್ಲ.
2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಕಣಕ್ಕಿಳಿದಿದ್ದ ಎಸ್‌ಪಿ ಹಾಗೂ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿಯ ಬಲ ಗಣನೀಯವಾಗಿ ಕುಸಿಯುವಂತೆ ಮಾಡಿದ್ದವು. ಈ ಪಕ್ಷಗಳು ಇಲ್ಲಿನ 80 ಲೋಕಸಭಾ ಸ್ಥಾನಗಳಲ್ಲಿ 44ರಲ್ಲಿ ಜಯ ಸಾಧಿಸಿದರೆ, ಆಡಳಿತಾರೂಢ ಬಿಜೆಪಿಗೆ 33 ಕಡೆ ಮಾತ್ರ ಗೆಲುವು ದಕ್ಕಿತ್ತು.
ಆದರೆ, 2014ರ ಹಾಗೂ 2019ರ ಚುನಾವಣೆಗಳಲ್ಲಿ ಕೇಸರಿ ಪಕ್ಷಕ್ಕೆ ಈ ಪರಿಸ್ಥಿತಿ ಇರಲಿಲ್ಲ. ಆ ಎರಡೂ ಚುನಾವಣೆಗಳಲ್ಲಿ ಕ್ರಮವಾಗಿ 71 ಹಾಗೂ 62 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

