ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇಂಗ್ಲೆಂಡ್‌ನಲ್ಲಿ ಭೀಕರ ಬರ, ಉಷ್ಣಾಂಶ ಏರಿಕೆ; ಆಹಾರ ಕೊರತೆ, ಕಾಡ್ಗಿಚ್ಚಿನ ಆತಂಕ
ಒಂದು ಸಾಲಿನಲ್ಲಿಇಂಗ್ಲೆಂಡ್‌ನಲ್ಲಿ ಸತತ ಬರಗಾಲ, ತೀವ್ರ ಉಷ್ಣಾಂಶ ಮತ್ತು ಮಳೆಯ ಕೊರತೆಯಿಂದಾಗಿ ಕೃಷಿ ಉತ್ಪಾದನೆ ಕುಸಿದಿದ್ದು, ದೇಶದಲ್ಲಿ ಆಹಾರದ ಕೊರತೆ ಹಾಗೂ ಕಾಡ್ಗಿಚ್ಚಿನ ಭೀತಿ ಉಂಟಾಗಿದೆ.
ಪ್ರಮುಖ ಪ್ರಶ್ನೋತ್ತರ
ಇಂಗ್ಲೆಂಡ್‌ನಲ್ಲಿ ಬರದ ಪರಿಸ್ಥಿತಿ ಉಂಟಾಗಲು ಮುಖ್ಯ ಕಾರಣಗಳೇನು?
ಕಳೆದ ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಉಂಟಾಗಿರುವ ಭೀಕರ ಬರ, ಮಳೆಯ ಕೊರತೆ ಮತ್ತು ದಾಖಲೆ ಮಟ್ಟದ ಉಷ್ಣಾಂಶ ಏರಿಕೆಯೇ ಈ ಸಂಕಷ್ಟಕ್ಕೆ ಮುಖ್ಯ ಕಾರಣವಾಗಿದೆ.
ಈ ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರದ ಮೇಲೆ ಯಾವ ಪರಿಣಾಮ ಬೀರಿದೆ?
ಗೋಧಿ ಮತ್ತು ಬಾರ್ಲಿಯಂತಹ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೆ ಕುಂಠಿತವಾಗಿವೆ, ಅಲ್ಲದೆ ನೀರಿನ ನಿರ್ಬಂಧಗಳಿಂದಾಗಿ ರೈತರಿಗೆ ಬಿತ್ತನೆ ಮತ್ತು ನೀರಾವರಿ ಕಷ್ಟಸಾಧ್ಯವಾಗಿದೆ.
ಆಹಾರದ ಕೊರತೆಯನ್ನು ತಡೆಯಲು ರೈತರ ಸಂಘಟನೆ ಮಾಡಿರುವ ಮನವಿ ಏನು?
ರಾಷ್ಟ್ರೀಯ ರೈತರ ಒಕ್ಕೂಟವು ದೇಶೀಯ ಆಹಾರ ಉತ್ಪಾದನೆಗೆ ಆದ್ಯತೆ ನೀಡಲು ಮತ್ತು ಜಮೀನುಗಳಲ್ಲಿ ನೀರು ಸಂಗ್ರಹಣಾ ವ್ಯವಸ್ಥೆ ನಿರ್ಮಿಸಲು ತೆರಿಗೆ ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ಕೋರಿದೆ.
ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಆರೋಗ್ಯ ಇಲಾಖೆ ನೀಡಿರುವ ಎಚ್ಚರಿಕೆ ಏನು?
ತಾಪಮಾನ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿರುವುದರಿಂದ, ಯುಕೆ ಆರೋಗ್ಯ ಭದ್ರತಾ ಸಂಸ್ಥೆ ಎಂಟು ಪ್ರದೇಶಗಳಿಗೆ ಶಾಖ ಸಂಬಂಧಿತ ಆರೋಗ್ಯ ಮುನ್ನೆಚ್ಚರಿಕೆ ನೀಡಿದೆ.
ಕಾಡ್ಗಿಚ್ಚಿನ ಅಪಾಯ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ?
ಒಣ ಹವಾಮಾನದಿಂದಾಗಿ ಕಾಡ್ಗಿಚ್ಚಿನ ಅಪಾಯ ತೀವ್ರಗೊಂಡಿದ್ದು, ಕಳೆದ ಎರಡು ವಾರಗಳಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 200ಕ್ಕೂ ಹೆಚ್ಚು ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿವೆ.
ಪ್ರಮುಖ ಅಂಕಿಅಂಶಗಳು
ಶೇ 8ಜುಲೈ ತಿಂಗಳ ಮಳೆಯ ಪ್ರಮಾಣ35 ಡಿಗ್ರಿ ಸೆಲ್ಸಿಯಸ್ಗರಿಷ್ಠ ಉಷ್ಣಾಂಶದ ಮುನ್ಸೂಚನೆ200ಕ್ಕೂ ಹೆಚ್ಚುವರದಿಯಾದ ಕಾಡ್ಗಿಚ್ಚಿನ ಘಟನೆಗಳು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಲಂಡನ್: 'ಹೋದ ವರ್ಷ ಮಾತ್ರವಲ್ಲ. ಈ ವರ್ಷವೂ ಮಳೆಯಿಲ್ಲ. ಬಿಸಿಲಿನ ಪ್ರಮಾಣವೂ ಏರಿಕೆಯಾಗಿದೆ. ಗೋಧಿ ಬೆಳೆ ಸಾಮಾನ್ಯ ಎತ್ತರದ ಅರ್ಧದಷ್ಟು ಮಾತ್ರ ಬೆಳೆದಿದೆ. ಲಭ್ಯವಿರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ/ ಇಂಗ್ಲೆಂಡ್‌ನಲ್ಲಿ ಈ ಬಾರಿ ದಾಖಲೆಯಷ್ಟು ಬೇಗನೆ ಕೊಯ್ಲು ನಡೆಯುತ್ತಿದೆ'.
ಇದು ಯೂರೋಪಿಯನ್ ಒಕ್ಕೂಟದ(ಬ್ರಿಟನ್) ಹಲವು ಭಾಗದಲ್ಲಿ ಸುತ್ತಾಡಿ ಅಲ್ಲಿನ ಗೋಧಿ ಬೆಳೆಗಾರರಿಂದ ಇಂತಹುದೇ ಉತ್ತರ ಬರುತ್ತದೆ.
ಯೂರೋಪಿನ್ ಒಕ್ಕೂಟದ ಹಲವು ಭಾಗಗಳಲ್ಲಿ ಈ ವರ್ಷವೂ ತೀವ್ರ ಬರ ಕಾಣಿಸಿಕೊಂಡಿದೆ. ಉಷ್ಣಾಂಶದ ಪ್ರಮಾಣದಲ್ಲಿ ಗಣನೀಯ ಏರಿಕೆ, ಮಳೆ ಪ್ರಮಾಣದ ಕೊರತೆಯಿಂದಾಗಿ ಬರ ಇಂಗ್ಲೆಂಡ್ ನ ಕೆಲವು ಭಾಗಗಳಲ್ಲಿ ತೀವ್ರಗೊಂಡಿದೆ. ಅದರಲ್ಲೂ ಐದು ವರ್ಷದ ಅಂತರದಲ್ಲಿ ಇದು ಮೂರನೇ ಬರ. ಅದರಲ್ಲೂ ಸತತ ಎರಡನೇ ಬರದ ಸನ್ನಿವೇಶ. ಈ ಕಾರಣದಿಂದ ಯೂರೋಪಿಯನ್ ಒಕ್ಕೂಟದಲ್ಲಿ ಸೃಷ್ಟಿಯಾಗಿರುವ ಬರವು ಆಹಾರ ಕೊರತೆಗೂ ದಾರಿ ಮಾಡಿಕೊಟ್ಟಿದೆ. ತೀವ್ರ ಆರ್ಥಿಕ ಸಂಕಷ್ಟವನ್ನೂ ಸೃಷ್ಟಿಸಿದೆ.
ಎಲ್ಲಾ ಭಾಗಗಳಲ್ಲೂ ತೀವ್ರವಾದ ಶಾಖದ ಅಲೆಗಳು ಮುಂದುವರಿದಿದ್ದರೆ, ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬರವನ್ನು ಅಧಿಕೃತವಾಗಿ ಘೋಷಣೆ ಕೂಡ ಮಾಡಲಾಗಿದೆ. ಇದರಿಂದಾಗಿ ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಉಂಟಾಗಬಹುದು ಎಂದು ಯುಕೆ ರಾಷ್ಟ್ರೀಯ ರೈತರ ಒಕ್ಕೂಟ ಎಚ್ಚರಿಕೆ ನೀಡಿದೆ.
ಈ ಎಚ್ಚರಿಕೆಗಳ ನಡುವೆಯೇ, ದೇಶದ ಕೆಲವು ಭಾಗಗಳಲ್ಲಿ ತಾಪಮಾನವು 30 ರಿಂದ 32 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಾಗುವ ಸಾಧ್ಯತೆಯಿರುವುದರಿಂದ, ಯುಕೆ ಆರೋಗ್ಯ ಭದ್ರತಾ ಸಂಸ್ಥೆ ಯೂರೋಪಿಯನ್ ಒಕ್ಕೂಟದ ಎಂಟು ಪ್ರದೇಶಗಳಿಗೆ ಶಾಖ ಸಂಬಂಧಿತ ಆರೋಗ್ಯ ಮುನ್ನೆಚ್ಚರಿಕೆ ನೀಡಿದೆ.
ಕೆಲವು ಭಾಗಗಳು ಈಗ ಈ ವರ್ಷದ ನಾಲ್ಕನೇ ಉಷ್ಣ ಅಲೆಗೆ ಸಾಕ್ಷಿಯಾಗುತ್ತಿವೆ. ಇದರಿಂದ ಉಷ್ಣ-ಸಂಬಂಧಿತ ಆರೋಗ್ಯ ಎಚ್ಚರಿಕೆಗಳನ್ನು ಜಾರಿಗೊಳಿಸಲಾಗಿದೆ. ಆಗ್ನೇಯ ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ತಾಪಮಾನವು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.
ಚಳಿಗಾಲದಲ್ಲಿ ದೇಶಾದ್ಯಂತದ ಕೃಷಿ ಭೂಮಿಗಳು ಬಾಧಿತವಾಗಿದ್ದರಿಂದ ಬಿತ್ತನೆ ಕಾರ್ಯ ಅತ್ಯಂತ ಕಷ್ಟಕರವಾಗಿತ್ತು; ಇದೀಗ ಬರಗಾಲದ ಕಾರಣ ನೀರಾವರಿ ಸೌಲಭ್ಯಗಳ ಮೇಲಿನ ನಿರ್ಬಂಧಗಳಿಂದಾಗಿ ಅನೇಕ ಪ್ರದೇಶಗಳಲ್ಲಿ ರೈತರಿಗೆ ನೀರು ಲಭ್ಯವಿಲ್ಲದಂತಾಗಿದೆ. ಇದು ಸಹಜವಾಗಿಯೇ ಬರದ ಸನ್ನಿವೇಶಕ್ಕೆ ದೂಡಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಹೆಚ್ಚಿದ ಬರ ಸ್ಥಿತಿ
ಕಳೆದ ಐದು ವರ್ಷಗಳಲ್ಲಿ 2022, 2025ರ ನಂತರ 2026ರಲ್ಲೂ ಎದುರಾಗಿರುವುದರಿಂದ ರೈತರು ಈ ಪರಿಸ್ಥಿತಿಯನ್ನು ಬ್ರಿಟಿಷ್ ಕೃಷಿ ಉದ್ಯಮಕ್ಕೆ ಬಿಕ್ಕಟ್ಟಿನ ಸನ್ನಿವೇಶ ಎಂದು ಬಣ್ಣಿಸುತ್ತಿದ್ದಾರೆ.
ದಿ ಗಾರ್ಡಿಯನ್' ವರದಿಯ ಪ್ರಕಾರ, ಯುಕೆಯ ಕೆಲವು ಭಾಗಗಳಲ್ಲಿ ತಿಂಗಳಿಗೂ ಹೆಚ್ಚು ಕಾಲ ಮಳೆಯಾಗಿಲ್ಲ ಎಂಬುದು ಗಮನಾರ್ಹ; ಜೊತೆಗೆ ಬೇಸಿಗೆಯ ಆರಂಭದಿಂದಲೂ ದೇಶವು ದಾಖಲೆ ಮಟ್ಟದ ಶಾಖದ ಅಲೆಗಳಿಗೆ ಸಾಕ್ಷಿಯಾಗಿದ್ದು, ಇದರಿಂದ ಮಣ್ಣಿನ ತೇವಾಂಶದ ಕೊರತೆ ಕಂಡು ಬಂದಿದೆ. ಇದು ಬಿತ್ತನೆಗೆ ತೊಡಕಾಗಿದೆ.
ಈಗಿನ ಪರಿಸ್ಥಿತಿ ಆಹಾರದ ಕೊರತೆಗೆ ಕಾರಣವಾಗಬಹುದು. ಮುಂದಿನ ವರ್ಷಗಳಿಗೆ ಸಿದ್ಧತೆ ನಡೆಸಲು ರೈತರು ತಮ್ಮ ಜಮೀನುಗಳಲ್ಲಿ ನೀರು ಸಂಗ್ರಹಣಾ ವ್ಯವಸ್ಥೆಗಳನ್ನು ನಿರ್ಮಿಸಲು ತೆರಿಗೆ ವಿನಾಯಿತಿಗಳನ್ನು ನೀಡಬೇಕು ಎಂದು ಬ್ರಿಟೀಷ್ ಪ್ರಧಾನ ಮಂತ್ರಿಯವರಿಗೆ ರಾಷ್ಟ್ರೀಯ ರೈತರ ಒಕ್ಕೂಟ( ಎನ್‌ಎಫ್‌ಯು) ಅಧ್ಯಕ್ಷ ಟಾಮ್ ಬ್ರಾಡ್‌ಶಾ ಮನವಿ ಮಾಡಿದರು.
ನಾವು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳೋಣ. ಸಮಸ್ಯೆ ಎದುರಿಸಲು ದೇಶೀಯ ಆಹಾರ ಉತ್ಪಾದನೆಗೆ ಆದ್ಯತೆ ನೀಡೋಣ ಎನ್ನುವುದು ಬ್ರಾಡ್‌ಶಾ ಮನವಿ.
ನಮ್ಮ ಆಹಾರ ಮತ್ತು ತರಕಾರಿಗಳ ಉತ್ಪಾದನೆಗಾಗಿ ನಾವು ಪ್ರಸ್ತುತ ಅವಲಂಬಿಸಿರುವ ಪ್ರಪಂಚದ ಇತರ ದೇಶಗಳ ಹವಾಮಾನವೂ ಬದಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆಹಾರ ಉತ್ಪನ್ನಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಅನ್ನಿಸುತ್ತಿದೆ. ಈ ಬೇಸಿಗೆಯಲ್ಲಿ ಜುಲೈ ತಿಂಗಳ ಸರಾಸರಿ ಮಳೆಯ ಶೇ 8 ರಷ್ಟು ಮಳೆ ಬಂದಿದೆ. ಇದು ಇತ್ತೀಚಿನ ದಶಕಗಳಲ್ಲಿ ಅತ್ಯಂತ ಕಡಿಮೆ ಮಳೆಯಾದ ಜುಲೈ ತಿಂಗಳು ಎಂದು ಹವಾಮಾನ ಇಲಾಖೆ ಹೇಳಿದೆ.
ಆಹಾರದ ಕೊರತೆ ಆತಂಕ
ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿ ಮಂಡಳಿ ಪ್ರಕಾರ, ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳು ವಿಶೇಷವಾಗಿ ಬಾಧಿತವಾಗಿವೆ. ಒಣ ಹವಾಮಾನವು ಪ್ರಕೃತಿಯ ಮೇಲೆ ಪರಿಣಾಮ ಬೀರಿದೆ. ನದಿಯ ನೀರಿನ ಹರಿವು ಕಡಿಮೆಯಾಗಿರುವುದರಿಂದ ಅಟ್ಲಾಂಟಿಕ್ ಸಾಲ್ಮನ್ ಮೀನುಗಳು ನದಿಯ ಮೇಲ್ಭಾಗಕ್ಕೆ ಚಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ವಾತಾವರಣವೂ ಇದೆ.
ಬೆಳೆಗಾರರು ಯಾವಾಗಲೂ ಹವಾಮಾನದ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದರೆ ಈಗ ಅವರು ಅನುಭವಿಸುತ್ತಿರುವುದು ಹವಾಮಾನ ಬದಲಾವಣೆಯ ನೇರ ಪರಿಣಾಮವಾಗಿದೆ. ತೀವ್ರತರವಾದ ಹವಾಮಾನ ಪರಿಸ್ಥಿತಿಗಳು ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚು ಕಷ್ಟಕರ, ಅಪಾಯಕಾರಿ ಮತ್ತು ದುಬಾರಿಯನ್ನಾಗಿ ಮಾಡುತ್ತಿವೆ ಎನ್ನುತ್ತಾರೆ ಇಂಗ್ಲೆಂಡ್ ಮತ್ತು ವೇಲ್ಸ್‌ನ 'ನ್ಯಾಷನಲ್ ಫಾರ್ಮರ್ಸ್ ಯೂನಿಯನ್'ನ ಉಪಾಧ್ಯಕ್ಷ ಪಾಲ್ ಟಾಮ್‌ಕಿನ್ಸ್
ಬಿಸಿ ಮತ್ತು ಒಣ ಹವಾಮಾನವು ಕಾಡ್ಗಿಚ್ಚು ಹರಡಲು ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯುಕೆಯಾದ್ಯಂತ ಕಾಡ್ಗಿಚ್ಚಿನ ಅಪಾಯವು ಹೆಚ್ಚಾಗಿಯೇ ಇದೆ. ಕಳೆದ ಎರಡು ವಾರಗಳಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 200ಕ್ಕೂ ಹೆಚ್ಚು ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿವೆ ಎಂದು ನ್ಯಾಷನಲ್ ಫೈರ್ ಚೀಫ್ಸ್ ಕೌನ್ಸಿಲ್ ಎಚ್ಚರಿಕೆ ನೀಡಿದೆ.ಕಾಡ್ಗಿಚ್ಚು ಹೆಚ್ಚಳ
