Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ನಾಶವಾಗಿದೆ, ಯುದ್ಧ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಬೇಕು: ಟ್ರಂಪ್

ಇರಾನ್ ನಾಶವಾಗಿದೆ, ಯುದ್ಧ ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಬೇಕು: ಟ್ರಂಪ್

ಬೀಜಿಂಗ್: 'ಇರಾನ್ ಸರ್ವನಾಶವಾಗಿದ್ದು, ಈಗ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಬೇಕು ಅಥವಾ ಮತ್ತಷ್ಟು ವಿನಾಶವನ್ನು ಎದುರಿಸಬೇಕು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆಗಿನ ಮಾತುಕತೆಯ ಬಳಿಕ 'ಫಾಕ್ಸ್ ನ್ಯೂಸ್‌'ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಟ್ರಂಪ್, 'ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ' ಎಂದು ಪುನರುಚ್ಚರಿಸಿದ್ದಾರೆ.

'ಇರಾನ್ ಕಥೆ ಮುಗಿದಿದೆ. ಅವರು ಈಗ ಒಪ್ಪಂದ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ನಿರ್ನಾಮ ಮಾಡುತ್ತೇವೆ' ಎಂದು ಟ್ರಂಪ್ ಎಚ್ಚರಿಸಿದ್ದಾರೆ.

'ಚೀನಾದ ಅಧ್ಯಕ್ಷರು ಅಮೆರಿಕ ಹಾಗೂ ಇರಾನ್ ನಡುವಣ ಒಪ್ಪಂದವನ್ನು ಎದುರು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಹಾಯ ಮಾಡಲು ಉತ್ಸುಕರಾಗಿದ್ದಾರೆ. ಇರಾನ್ ಅಣ್ವಸ್ತ್ರ ಹೊಂದುವುದನ್ನು ಚೀನಾ ಕೂಡ ಬಯಸುವುದಿಲ್ಲ' ಎಂದು ನಂಬಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇರಾನ್‌ಗೆ ಚೀನಾದ ಬೆಂಬಲದ ವಿಷಯದ ಕುರಿತು ಕೇಳಿದಾಗ, 'ಈ ವಿಷಯವನ್ನು ಷಿ ಜೊತೆ ಚರ್ಚಿಸಲಾಗಿದೆ. ಇರಾನ್‌ಗೆ ಮಿಲಿಟರಿ ಸಹಾಯ ಮಾಡುವುದಿಲ್ಲವೆಂದು ಅವರು ಭರವಸೆ ನೀಡಿದ್ದಾರೆ' ಎಂದು ಹೇಳಿದ್ದಾರೆ.

ಜಿನ್‌ಪಿಂಗ್ ಅವರನ್ನು 'ಅದ್ಭುತ ನಾಯಕ' ಎಂದು ಬಣ್ಣಿಸಿರುವ ಟ್ರಂಪ್, ಚೀನಾದೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಜಿನ್‌ಪಿಂಗ್ ಅವರಿಗೆ ಅಮೆರಿಕದಿಂದ ತೈಲ ಖರೀದಿಸುವಂತೆ ಟ್ರಂಪ್ ಹೇಳಿದ್ದಾರೆ. ಈ ವೇಳೆ ಇದು ಒಳ್ಳೆಯ ಯೋಜನೆ ಎಂದು ಜಿನ್‌ಪಿಂಗ್ ಪ್ರತಿಕ್ರಿಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani