Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ಪ್ರತಿಕಾರದ ಪರಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್‌

ಇರಾನ್‌ ಪ್ರತಿಕಾರದ ಪರಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್‌: 'ತನ್ನ ಮೇಲಿನ ದಾಳಿಗೆ ಇರಾನ್ ಈ ರೀತಿಯಾಗಿ ಪ್ರತಿಕ್ರಿಯಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಪ್ಪಿಕೊಂಡಿದ್ದಾರೆ.

ಸಂಘರ್ಷದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, 'ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ.

ನಾವು ದಿಗ್ಭ್ರಮೆಗೊಂಡಿದ್ದೇವೆ. ಇರಾನ್‌ನ ಪ್ರತೀಕಾರದ ತೀವ್ರತೆಯು ನಮಗೆ ಅಚ್ಚರಿ ಮೂಡಿಸಿದೆ. ವಿಶೇಷವಾಗಿ ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್ ಮೇಲೆ ಇರಾನ್‌ ದಾಳಿ ನಡೆಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.

'ತನ್ನ ನೆರೆಯ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮಾಡಬಾರದಿತ್ತು. ಇರಾನ್‌ ಗುರಿಯಾಗಿಸಿದ ಕೆಲವು ಕ್ಷಿಪಣಿಗಳು ಇತರ ಕೊಲ್ಲಿ ರಾಷ್ಟ್ರಗಳ ಮೇಲೆ ಅಪ್ಪಳಿಸಿವೆ' ಎಂದು ವಿವರಿಸಿದ್ದಾರೆ.

ಅದಾಗ್ಯೂ, ಇರಾನ್ ಮೇಲೆ ದಾಳಿ ನಡೆಸುವ ಅಮೆರಿಕದ ನಿರ್ಧಾರವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

'ಅಮೆರಿಕದ ದಾಳಿಯು ಇರಾನ್‌ನ ಸೇನಾ ಸಾಮರ್ಥ್ಯಗಳನ್ನು ಸೀಮಿತಗೊಳಿಸಲು ಸಹಾಯ ಮಾಡಿದೆ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ಎದುರಾಗಿದ್ದ ಬೆದರಿಕೆಯನ್ನು ಕಡಿಮೆ ಮಾಡಿದೆ' ಎಂದು ಅವರು ವಾದಿಸಿದ್ದಾರೆ.

ಇದೇ ವೇಳೆ ಕದನ ವಿರಾಮ ಸಾಧ್ಯತೆಗಳ ಬಗ್ಗೆ ಮಾತನಾಡಿದ ಟ್ರಂಪ್‌, 'ತಕ್ಷಣಕ್ಕೆ ಸಾಧ್ಯವಾಗದಿದ್ದರೂ ಶೀಘ್ರದಲ್ಲೇ ಯುದ್ಧ ಅಂತ್ಯವಾಗುತ್ತದೆ' ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani