Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ನ ಕೆಶ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ: ಪರಿಸ್ಥಿತಿ ಮತ್ತೆ ಉದ್ವಿಗ್ನ

ಇರಾನ್‌ನ ಕೆಶ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ: ಪರಿಸ್ಥಿತಿ ಮತ್ತೆ ಉದ್ವಿಗ್ನ

ಕೈರೊ: ಇರಾನ್‌ನ ಕೆಶ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಹೊರ್ಮುಜ್‌ ಜಲಸಂಧಿಯಲ್ಲಿರುವ ದ್ವೀಪದಲ್ಲಿ ಹಲವು ಸ್ಫೋಟಗಳು ಸಂಭವಿಸಿದೆ ಎಂದೂ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಇರಾನ್ ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ದಾಳಿ ಇದಾಗಿದೆ.

ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಪುನರಾರಂಭಿಸುವ ಯಾವುದೇ ಉದ್ದೇಶವನ್ನು ಸೂಚಿಸದಂತೆ ಸಣ್ಣ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದೂ ಅಮೆರಿಕ ಹೇಳಿಕೊಂಡಿದೆ.

'ಇರಾನ್‌ನಲ್ಲಿನ ಉಳಿದ ಗುರಿಗಳ ಮೇಲೆ ಅಮೆರಿಕ ತಕ್ಷಣ ದಾಳಿ ನಡೆಸಬಹುದು' ಎಂದು ಟ್ರಂಪ್ ಭಾನುವಾರ ಹೇಳಿದ್ದರು.

ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಟ್ರಂಪ್ ಮಾತುಕತೆ ನಡೆಸಿದ್ದಾರೆ. ತಕ್ಷಣ ಇರಾನ್ ಮೇಲೆ ದಾಳಿ ನಡೆಸುವಂತೆ ನೆತನ್ಯಾಹು ಅವರು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಆದರೆ ಟ್ರಂಪ್ ಅವರು ಮಾತುಕತೆಗೆ ಉತ್ಸುಕರಾಗಿದ್ದರು ಎಂದು ಉಭಯ ದೇಶಗಳ ಅಧಿಕಾರಿಗಳು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಹೊಸ ಯುದ್ಧ ದೀರ್ಘಕಾಲ ನಡೆಯಬಹುದು: ಇರಾನ್

ಮತ್ತೆ ದಾಳಿ ನಡೆಸುವುದಾಗಿ ಎಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ನೀಡಿರುವ ಇರಾನ್‌, 'ಅಮೆರಿಕ ಜೊತೆ ಮತ್ತೆ ನಡೆಯುವ ಯುದ್ಧವು ಹಿಂದಿನ ಸಂಘರ್ಷಕ್ಕಿಂತ ದೀರ್ಘಕಾಲ ನಡೆಯಬಹುದು' ಎಂದು ಹೇಳಿದೆ.

'ಮತ್ತೆ ಯುದ್ಧ ನಡೆದರೆ ಅದರ ಅಂತ್ಯಕ್ಕೆ ಸಮಯ ಮತ್ತು ಷರತ್ತುಗಳನ್ನು ನಿರ್ಧರಿಸುವ ಸ್ಥಾನದಲ್ಲಿ ಟ್ರಂಪ್ ಅವರು ಇರುವುದಿಲ್ಲ' ಎಂದು ಇರಾನ್ ಸೇನೆಯ ವಕ್ತಾರ ಮೊಹಮ್ಮದ್‌ ಅಕ್ರಮಿನಿಯಾ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani