ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇರಾನ್‌ನ ಖಾರ್ಗ್ ದ್ವೀಪದತ್ತ ಹೊರಟಿದ್ದ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ
ಒಂದು ಸಾಲಿನಲ್ಲಿಇರಾನ್‌ನ ಖಾರ್ಗ್ ದ್ವೀಪಕ್ಕೆ ತೆರಳುತ್ತಿದ್ದ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಅಮೆರಿಕದ ನೌಕಾಪಡೆ ಕ್ಷಿಪಣಿ ದಾಳಿ ನಡೆಸಿ ದಿಗ್ಬಂಧನವನ್ನು ಜಾರಿಗೊಳಿಸಿದೆ.
ಪ್ರಮುಖ ಸಂಗತಿಗಳು• ತೈಲ ಟ್ಯಾಂಕರ್ ಮೇಲೆ ದಾಳಿಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್‌ನ ಖಾರ್ಗ್ ದ್ವೀಪದತ್ತ ಸಾಗುತ್ತಿದ್ದ 'M/T ಲೆಕ್ಸಿ' ಎಂಬ ತೈಲ ಟ್ಯಾಂಕರ್ ಮೇಲೆ ಅಮೆರಿಕ ಸೇನೆ ಹೆಲ್‌ಫೈರ್ ಕ್ಷಿಪಣಿ ದಾಳಿ ನಡೆಸಿದೆ.• ಅಮೆರಿಕದ ಕಠಿಣ ದಿಗ್ಬಂಧನಇರಾನ್ ವಿರುದ್ಧ ಅಮೆರಿಕ ಹೇರಿರುವ ನೌಕಾ ದಿಗ್ಬಂಧನದ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ.• ಎಚ್ಚರಿಕೆಯ ನಂತರದ ಕ್ರಮಮಾರ್ಗ ಬದಲಾಯಿಸುವಂತೆ ಅಮೆರಿಕ ಸೇನೆ ಟ್ಯಾಂಕರ್ ಸಿಬ್ಬಂದಿಗೆ ಹಲವು ಬಾರಿ ಸೂಚನೆ ನೀಡಿದ್ದರೂ, ಅದನ್ನು ಕಡೆಗಣಿಸಿ ಇರಾನ್ ಕಡೆಗೆ ತೆರಳಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.• ಅಸ್ಪಷ್ಟ ಶಾಂತಿ ಮಾತುಕತೆಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರೂ, ಪರಸ್ಪರ ದಾಳಿಗಳಿಂದಾಗಿ ಕದನ ವಿರಾಮದ ಭವಿಷ್ಯ ಅನಿಶ್ಚಿತವಾಗಿದೆ.ಪ್ರಮುಖ ಅಂಕಿಅಂಶಗಳುಏಪ್ರಿಲ್ 13ದಿಗ್ಬಂಧನ ಕಾರ್ಯಾಚರಣೆ ಆರಂಭವಾದ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ದುಬೈ/ವಾಷಿಂಗ್ಟನ್: ಅಮೆರಿಕ ಇರಾನ್‌ನ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಿದ್ದು, ನಿಯಮ ಉಲ್ಲಂಘಿಸಿ ಇರಾನ್ ಪ್ರವೇಶಿಸಲು ಯತ್ನಿಸುತ್ತಿದ್ದ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
'ಬೋಟ್ಸ್‌ವಾನಾ ಧ್ವಜ ಹೊಂದಿರುವ 'M/T ಲೆಕ್ಸಿ' ಎಂದು ಗುರುತಿಸಲಾದ ತೈಲ ಟ್ಯಾಂಕರ್ ಇರಾನ್‌ನ ಖಾರ್ಗ್ ದ್ವೀಪದತ್ತ ಸಾಗಲು ಯತ್ನಿಸುತ್ತಿದ್ದ ವೇಳೆ ತಡೆಯೊಡ್ಡಲಾಗಿದೆ. ಮಾರ್ಗ ಬದಲಾಯಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಟ್ಯಾಂಕರ್ ಇರಾನ್‌ನತ್ತ ಹೊರಟಿತ್ತು' ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.
'ತೈಲ ಟ್ಯಾಂಕರ್ ಮೇಲೆ ಹೆಲ್‌ಫೈರ್ ಕ್ಷಿಪಣಿ ದಾಳಿ ನಡೆಸಿದ್ದೇವೆ. ಈ ಕ್ರಮವು ಏಪ್ರಿಲ್ 13ರಂದು ಆರಂಭವಾದ ದಿಗ್ಬಂಧನದ ಕಾರ್ಯಾಚರಣೆಯ ಭಾಗವಾಗಿದೆ' ಎಂದು ಅಮೆರಿಕ ಹೇಳಿದೆ.
ಇರಾನ್‌ನೊಂದಿಗಿನ ಮಾತುಕತೆಯು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಯುದ್ಧ ಅಂತ್ಯಗೊಳಿಸಲು ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿರುವ ನಡುವೆಯೂ, ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿರುವುದರಿಂದ ಕದನ ವಿರಾಮ ಒಪ್ಪಂದ ಕುರಿತು ಅನುಮಾನ ಮೂಡಿದೆ.

