ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇರಾನ್‌ನಿಂದ ಕದನ ವಿರಾಮ ಪ್ರಸ್ತಾವ ತಿರಸ್ಕಾರ: 4 ಗಂಟೆಯಲ್ಲಿ ಸರ್ವನಾಶ ಎಂದ ಟ್ರಂಪ್
ಒಂದು ಸಾಲಿನಲ್ಲಿಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ಅನ್ನು ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಸರ್ವನಾಶ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಸಂಗತಿಗಳು• ಅಮೆರಿಕದ ಗಂಭೀರ ಎಚ್ಚರಿಕೆಮಂಗಳವಾರ ರಾತ್ರಿಯೊಳಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಇರಾನ್ ಅನ್ನು ನಾಲ್ಕು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಧ್ವಂಸಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.• ದಾಳಿಯ ಗುರಿಗಳುಟ್ರಂಪ್ ಅವರ ಯೋಜನೆಯ ಪ್ರಕಾರ, ದಾಳಿಯ ವೇಳೆ ಇರಾನ್‌ನ ಎಲ್ಲಾ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಶಾಶ್ವತವಾಗಿ ನಾಶಪಡಿಸಲಾಗುವುದು ಎಂದು ತಿಳಿಸಿದ್ದಾರೆ.• ಹೊರ್ಮುಜ್ ಜಲಸಂಧಿ ತೆರವುಇರಾನ್ ತನ್ನ ನಿಯಂತ್ರಣದಲ್ಲಿರುವ ಹೊರ್ಮುಜ್ ಜಲಸಂಧಿಯನ್ನು ಮಂಗಳವಾರ ರಾತ್ರಿ 8 ಗಂಟೆಯೊಳಗೆ ಮುಕ್ತಗೊಳಿಸಬೇಕೆಂದು ಅಮೆರಿಕ ಕಟ್ಟುನಿಟ್ಟಾದ ಸೂಚನೆ ನೀಡಿದೆ.• ಇರಾನ್ ನಿಲುವುಇರಾನ್ ಈಗಾಗಲೇ ಅಮೆರಿಕ ಪ್ರಸ್ತಾವಿಸಿದ್ದ 45 ದಿನಗಳ ಕದನ ವಿರಾಮವನ್ನು ತಿರಸ್ಕರಿಸಿದ್ದು, ಯುದ್ಧಕ್ಕೆ ಕಾಯಂ ಅಂತ್ಯವನ್ನು ಬಯಸುವುದಾಗಿ ತಿಳಿಸಿದೆ.• ಪುನರ್ನಿರ್ಮಾಣದ ಭರವಸೆಒಂದು ವೇಳೆ ಇರಾನ್ ಅಮೆರಿಕದ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದರೆ, ದೇಶದ ಪುನರ್ನಿರ್ಮಾಣ ಕಾರ್ಯದಲ್ಲಿ ಅಮೆರಿಕ ಸಹಾಯ ಮಾಡುವ ಸಾಧ್ಯತೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.ಪ್ರಮುಖ ಅಂಕಿಅಂಶಗಳು4 ಗಂಟೆಟ್ರಂಪ್ ನೀಡಿದ ದಾಳಿಯ ಸಮಯ45 ದಿನಗಳುತಿರಸ್ಕರಿಸಿದ ಕದನ ವಿರಾಮ ದಿನಗಳುಮಂಗಳವಾರ ರಾತ್ರಿಸಮಯದ ಗಡುವುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ವಾಷಿಂಗ್ಟನ್: 'ಮಂಗಳವಾರ ರಾತ್ರಿಯೊಳಗೆ ನಮ್ಮೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳದಿದ್ದರೆ, ಕೇವಲ ನಾಲ್ಕೇ ಗಂಟೆಗಳಲ್ಲಿ ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಶ್ವೇತಭವನದಲ್ಲಿ ಸೋಮವಾರ ರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಇದೇ ವೇಳೆ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ದಾಳಿ ನಡೆಸಿದರೆ ಅದು ಯುದ್ಧಾಪರಾಧವಾಗಬಹುದು ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
'ನಮ್ಮ ಸೇನಾ ಶಕ್ತಿಯಿಂದಾಗಿ ಒಂದು ಯೋಜನೆಯೊಂದನ್ನು ರೂಪಿಸಿದ್ದೇವೆ. ಅದರಂತೆ ಮಂಗಳವಾರ ರಾತ್ರಿ 12 ಗಂಟೆಯ ವೇಳೆಗೆ ಇರಾನ್‌ನ ಪ್ರತಿಯೊಂದು ಸೇತುವೆಯೂ ನಾಶವಾಗಲಿದೆ. ಇರಾನ್‌ನ ಪ್ರತಿಯೊಂದು ವಿದ್ಯುತ್ ಸ್ಥಾವರವೂ ಸ್ಫೋಟಗೊಳ್ಳುತ್ತದೆ. ಮತ್ತೆಂದೂ ಬಳಸಲಾಗದಂತೆ ಸಂಪೂರ್ಣವಾಗಿ ಧ್ವಂಸಗೊಳ್ಳುತ್ತದೆ. ನಾವು ಮನಸ್ಸು ಮಾಡಿದರೆ ಇದೆಲ್ಲವೂ ಕೇವಲ ನಾಲ್ಕೇ ಗಂಟೆಗಳಲ್ಲಿ ಸಂಭವಿಸಲಿದೆ' ಎಂದು ಅವರು ಗುಡುಗಿದ್ದಾರೆ.
ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮತ್ತು ಹೊರ್ಮುಜ್ ಜಲಸಂಧಿಯನ್ನು ಮಂಗಳವಾರ ರಾತ್ರಿ 8 ಗಂಟೆಯೊಳಗೆ ಮುಕ್ತಗೊಳಿಸುವಂತೆ ಅವರು ಇರಾನ್ ಅನ್ನು ಒತ್ತಾಯಿಸಿದ್ದಾರೆ.
'ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ಇಲ್ಲ, ಖಂಡಿತವಾಗಿಯೂ ಇಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಇರಾನಿನ ಜನರು ತಾವು ಹೆಚ್ಚಿನ ದಾಳಿಗಳನ್ನು ನಡೆಸುವುದನ್ನು ಬಯಸುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಕಷ್ಟ ಅನುಭವಿಸಲು ಸಿದ್ಧರಿದ್ದಾರೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಒಂದು ವೇಳೆ ಇರಾನ್ ಒಪ್ಪಂದಕ್ಕೆ ಸಮ್ಮತಿಸಿದರೆ, ಆ ದೇಶದ ಪುನರ್ ನಿರ್ಮಾಣಕ್ಕೆ ಅಮೆರಿಕ ಸಹಾಯ ಮಾಡಬಹುದು ಎಂದೂ ಟ್ರಂಪ್ ಹೇಳಿದ್ದಾರೆ.
ಇರಾನ್ ಈಗಾಗಲೇ 45 ದಿನಗಳ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಯುದ್ಧಕ್ಕೆ ಕಾಯಂ ಅಂತ್ಯವನ್ನು ಬಯಸುವುದಾಗಿ ಹೇಳಿದೆ.
ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಭಾರಿ ಪ್ರಮಾಣದ ದಾಳಿ ನಡೆಸುವುದಾಗಿ ಇರಾನ್‌ಗೆ ಅಮೆರಿಕ ಬೆದರಿಕೆ ಹಾಕುತ್ತಲೇ ಬರುತ್ತಿದೆ. 'ಈ ಹಿಂದಿನ ದಾಳಿಗಳಿಗಿಂತ ಭೀಕರ ದಾಳಿಯನ್ನು ನಡೆಸಲಾಗುವುದು' ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಇದೇ ಸಂದರ್ಭ ವರದಿಗಾರರಿಗೆ ತಿಳಿಸಿದ್ದಾರೆ.
'ಇರಾನ್‌ಗೆ ಆಯ್ಕೆಯ ಅವಕಾಶವಿದೆ. ವಿವೇಕಯುತವಾಗಿ ನಿರ್ಧಾರ ತೆಗೆದುಕೊಳ್ಳಿ, ಏಕೆಂದರೆ ಅಧ್ಯಕ್ಷರು (ಟ್ರಂಪ್) ಆಟವಾಡುತ್ತಿಲ್ಲ. ನೀವು ಬೇಕಿದ್ದರೆ ಸುಲೈಮಾನಿ, ಮಡುರೊ ಅಥವಾ ಖಮೇನಿಯನ್ನು ಕೇಳಿ ನೋಡಿ' ಎಂದು ಪೀಟ್ ಹೆಗ್ಸೆತ್ ಎಚ್ಚರಿಸಿದ್ದಾರೆ.

