ಮೈಸೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಮೈಸೂರಿನ ಪುಷ್ಪಾ ಅಮರನಾಥ್ ದುಬೈನಲ್ಲಿ ಸಿಲುಕಿದ್ದಾರೆ.
'ಪತ್ರಿಕೆಯೊಂದು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲೆಂದು ದುಬೈಗೆ ಬಂದಿದ್ದೆ. ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
ನಾವು ಬರಬೇಕಿದ್ದ ವಿಮಾನ ರದ್ದಾಗಿದೆ. ಹೀಗಾಗಿ, ಇಲ್ಲೇ ಉಳಿಯುವಂತಾಗಿದೆ. ಹೋಟೆಲ್‌ವೊಂದರಲ್ಲಿ ತಂಗಿರುವ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಏನೂ ತೊಂದರೆ ಇಲ್ಲ' ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

