Dailyhunt Logo
  • Light mode
    Follow system
    Dark mode
    • Play Story
    • App Story
ಜಾತಿ ಪ್ರಮಾಣಪತ್ರ ಗೊಂದಲ ಸರಿಪಡಿಸಿ ಎಂದು ಭಾಗ್ಯಲಕ್ಷ್ಮಿ ಆಗ್ರಹ

ಜಾತಿ ಪ್ರಮಾಣಪತ್ರ ಗೊಂದಲ ಸರಿಪಡಿಸಿ ಎಂದು ಭಾಗ್ಯಲಕ್ಷ್ಮಿ ಆಗ್ರಹ

ಸಿಂಧನೂರು: ವಡ್ಡರ ಮತ್ತು ಭೋವಿ ಸಮಾಜದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಗೊಂದಲಗಳಿದ್ದು, ಅವುಗಳನ್ನು ಸರಿಪಡಿಸಬೇಕು ಎಂದು ವಡ್ಡರ ಭೋವಿ ಸಮಾಜದ ಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 'ಇತ್ತೀಚಿಗೆ ವಡ್ಡರ ಮತ್ತು ಭೋವಿ ಜನಾಂಗದ ಜಾತಿ ಪ್ರಮಾಣ ಪತ್ರ ಪಡೆಯಲು ಪರದಾಡಬೇಕಾಗಿದೆ.

ಹಲವು ಗೊಂದಲಗಳನ್ನು ಸೃಷ್ಠಿಸಲಾಗಿದೆ. ಕಾರಣ ಜಿಲ್ಲಾಧಿಕಾರಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

'ಜಾಗೃತಿ ವೇದಿಕೆಯು ಸಮಾಜಕ್ಕೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು, ಸಮುದಾಯ ಭವನಗಳ ನಿರ್ಮಾಣ ಮಾಡಲು ಪ್ರತಿಯೊಬ್ಬರಲ್ಲೂ ಭೋವಿ ನಿಗಮದ ಕುರಿತು ಜಾಗೃತಿ ಮೂಡಿಸಲು ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಲ್ಲಿ ವಿದ್ಯಾರ್ಥಿ ವೇತನ ಮತ್ತಿತರ ಸೌಕರ್ಯಗಳ ಮಾಹಿತಿ ಕಾಲಕಾಲಕ್ಕೆ ಒದಗಿಸುತ್ತದೆ' ಎಂದು ವಿವರಿಸಿದರು.

ನಿವೃತ್ತ ಶಿಕ್ಷಕರಾದ ಹನುಮಂತಪ್ಪ ಬಂಡಿ ವಡ್ಡರ, ಹುಲುಗಪ್ಪ, ಮಂಜುನಾಥ ಮಸ್ಕಿ, ಎಲ್ಲಪ್ಪ ನಿಲೋಗಲ್, ಬಸವರಾಜ ಬುಕ್ಕಣ್ಣ ಮಸ್ಕಿ, ಜನಾರ್ದನ ಗುತ್ತೇದಾರ, ಸಂತೋಷ ಸಿರವಾರ, ಹನುಮೇಶ ಗಣದಿನ್ನಿ ಸೇರಿದಂತೆ ಹಲವರು ಹಾಜರಿದ್ದರು.

261104-32-243020363

Dailyhunt
Disclaimer: This content has not been generated, created or edited by Dailyhunt. Publisher: Prajavani