ಕಾರ್ಕಳ: ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸಾಲ್ಮರದ ಕಚೇರಿಯಲ್ಲಿ ಪುರಸ್ಕರಿಸಲಾಯಿತು.
ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಗ್ರಾಮಾಂತರ ಠಾಣೆಯ ಸೀಮಾ ಸರ್ವತ್ ಅಂಜುಮ್ ಹಾಗೂ 90 ಬಾರಿ ರಕ್ತದಾನ ಮಾಡಿದ ಕ್ಬಾಲ್ ಅಹಮದ್ ಅವರನ್ನು ಅಭಿನಂದಿಸಲಾಯಿತು.
ಉಭಯ ಜಿಲ್ಲೆಗಳ ಅಧ್ಯಕ್ಷ ಅಶ್ಪಾಕ್ ಅಹಮದ್ ಮಾತನಾಡಿ, ನಮ್ಮ ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಸಂಸ್ಥೆಯ ಕೋಶಾಧಿಕಾರಿ ಮೊಹಮ್ಮದ್ ಶರೀಫ್ ಮಾತನಾಡಿ, ಸರ್ಕಾರಿ ಹುದ್ದೆಗಳನ್ನು ಪಡೆಯಲು ಶ್ರಮಿಸಬೇಕು. ನಿಮ್ಮ ವಿದ್ಯಾಭ್ಯಾಸಕ್ಕೆ ಜಮೀಯತುಲ್ ಸಹಕಾರ ನೀಡುತ್ತದೆ ಎಂದರು.
ನಾಸಿರ್ ಸ್ವಾಗತಿಸಿ ವಂದಿಸಿದರು. ಜಾಮಿಯಾ ಮಸೀದಿಯ ಧರ್ಮಗುರು ಕುರಾನ್ ಪಠಿಸಿದರು. ಮಹಮ್ಮದ್ ಹುಸೇನ್, ಅಬ್ದುಲ್ ರಶೀದ್ ಮೊಹಮ್ಮದ್ ಸಾಹೇಬ್, ಸೈಯದ್ ಹಸನ್, ಸಮದ್ ಖಾನ್, ಶೇಕ್ ಶಬ್ಬೀರ್, ನಿಟ್ಟೆ ಮೊಹಮ್ಮದ್ ಹಸನ್ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-28-939317060

