Dailyhunt
ಜನವಾಡ: ಸಿರಿಧಾನ್ಯ; ರೈತರಿಗೆ ಆನ್‍ಲೈನ್ ತರಬೇತಿ ಇಂದು

ಜನವಾಡ: ಸಿರಿಧಾನ್ಯ; ರೈತರಿಗೆ ಆನ್‍ಲೈನ್ ತರಬೇತಿ ಇಂದು

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಕೆವಿಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ಶನಿವಾರ (ಸೆ.18) ಬೆಳಿಗ್ಗೆ 11ಕ್ಕೆ 'ಸಿರಿಧಾನ್ಯಗಳು- ದೀರ್ಘಕಾಲದ ರೋಗಗಳಿಗೆ ರಾಮಬಾಣ' ಕುರಿತು ಆನ್‍ಲೈನ್‍ನಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಗೃಹ ವಿಜ್ಞಾನಿ ಡಾ. ರಾಜೇಶ್ವರಿ ಆರ್. ಅವರು, ದೀರ್ಘ ಕಾಲದ ರೋಗಗಳ ನಿವಾರಣೆಯಲ್ಲಿ ಸಿರಿಧಾನ್ಯದ ಮಹತ್ವವನ್ನು ವಿವರಿಸಲಿದ್ದಾರೆ. ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧಿತ ಪದಾರ್ಥಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.

ರೈತರು ಗೂಗಲ್ ಮೀಟ್ ಲಿಂಕ್ meet.google.com/bbc-zfab-iuf ಬಳಸಿ ತರಬೇತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani