Dailyhunt Logo
  • Light mode
    Follow system
    Dark mode
    • Play Story
    • App Story
ಜನ್ಮಸಿದ್ಧ ಪೌರತ್ವ: ಭಾರತ, ಚೀನಾವನ್ನು 'ನರಕಕೂಪ' ಎಂದು ನಿಂದಿಸಿದ ಟ್ರಂಪ್

ಜನ್ಮಸಿದ್ಧ ಪೌರತ್ವ: ಭಾರತ, ಚೀನಾವನ್ನು 'ನರಕಕೂಪ' ಎಂದು ನಿಂದಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕಿನ ಕುರಿತಂತೆ ಭಾರತ ಮತ್ತು ಚೀನಾ ವಿರುದ್ಧ ಜನಾಂಗೀಯ ನಿಂದನೆ ಇರುವ ಪತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ.

'ಏಷ್ಯಾದ ಎರಡು ದೇಶಗಳಿಂದ(ಚೀನಾ, ಭಾರತ) ಇಲ್ಲಿಗೆ ಬರುವ ಜನರು ಮಗುವನ್ನು ಹೆರುತ್ತಾರೆ.

ಮಗು ಜನ್ಮಸಿದ್ಧವಾಗಿ ಪೌರತ್ವ ಪಡೆಯುತ್ತದೆ. ಬಳಿಕ, ಚೀನಾ, ಭಾರತ ಮತ್ತು ಇತರ 'ನರಕಕೂಪ'ಗಳಿಂದ ಸಂಪೂರ್ಣ ಕುಟುಂಬವನ್ನು ಇಲ್ಲಿಗೆ ಕರೆತಂದು ನೆಲೆಸುತ್ತಾರೆ' ಎಂದು ಟ್ರಂಪ್ ದೂಷಿಸಿದ್ದಾರೆ.

ಪತ್ರದಲ್ಲಿ ಭಾರತೀಯರು ಮತ್ತು ಚೀನೀ ವಲಸಿಗರನ್ನು 'ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು' ಮತ್ತು 'ನಮ್ಮ ಧ್ವಜದ ಮೇಲೆ ಕಾಲಿಟ್ಟಿರುವವರು' ಎಂದೂ ಪತ್ರದಲ್ಲಿ ದೂಷಿಸಿದ್ದಾರೆ.

'ಎಲ್ಲ ಮಾಫಿಯಾಗಳು ಒಟ್ಟಾಗಿ ಸೇರಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಅವರು ಈ ದೇಶಕ್ಕೆ ಮಾಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರು. ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು. ನಮ್ಮನ್ನು ದೋಚಿದ್ದಾರೆ. ನಮ್ಮನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಂಡಿದ್ದಾರೆ. ನಮ್ಮ ಧ್ವಜದ ಮೇಲೆ ಹೆಜ್ಜೆ ಹಾಕಿದ್ದಾರೆ'ಎಂದೂ ಅವರು ಬರೆದಿದ್ದಾರೆ.

'ಅಮೆರಿಕದ ಬಹುತೇಕ ಎಲ್ಲ ಆಂತರಿಕ ಕಾರ್ಯವಿಧಾನಗಳನ್ನು ಭಾರತೀಯರು ಮತ್ತು ಚೀನಿಯರು ನಡೆಸಲು ಅನುಕೂಲವಾಗುವಂತೆ ಸ್ಥಾಪಿಸಲಾಗಿದೆ. ಹಾಗಾಗಿ, ನೀವು ಇಲ್ಲಿ ಕೆಲಸ ಮಾಡಲು ಭಾರತ ಅಥವಾ ಚೀನಾದಿಂದ ಬಂದಿರಬೇಕು'ಎಂದಿದ್ದಾರೆ.

ಅಮೆರಿಕದ ಸಂವಿಧಾನವು ಆಧುನಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಹಳೆಯದಾಗಿದೆ. ಹೆರಿಗೆ ಪ್ರವಾಸದಿಂದಾಗಿ ಸದ್ಯದ ವ್ಯವಸ್ಥೆ ಹಾಳಾಗುತ್ತಿದೆ. ಸಂವಿಧಾನವನ್ನು ವೈಮಾನಿಕ ಪ್ರಯಾಣ, ಟಿವಿ, ಇಂಟರ್‌ನೆಟ್, ರೇಡಿಯೊ ಬರುವುದಕ್ಕೂ ಮುನ್ನ ರಚಿಸಲಾಗಿದೆ. 9 ತಿಂಗಳ ಗರ್ಭಿಣಿಯರು ಇಲ್ಲಿಗೆ ಬಂದು ಮಗುವನ್ನು ಹೆರುವ ಮೂಲಕ ಆ ಮಗು ಸಹಜವಾಗಿ ನೆಲದ ಕಾನೂನಿನಂತೆ ಜನ್ಮಸಿದ್ಧ ಪೌರತ್ವ ಪಡೆಯುವುದನ್ನು ಹೇಗೆ ಸಮರ್ಥಿಸಲು ಸಾಧ್ಯ ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani