
ಮೇ 23ರಂದು ಟೋಕಿಯೋದ 'ಗ್ರಾಂಡ್ ಪ್ರಿನ್ಸ್ ಹೋಟೆಲ್ ಶಿನ್ ತಕನಾವಾ'ದಲ್ಲಿ ಈ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

ಈ ವೇಳೆ ರಶ್ಮಿಕಾ ಅವರು ಹೂವಿನ ಕಸೂತಿಯಿಂದ ಕೂಡಿರುವ ಕಪ್ಪು ಬಣ್ಣದ ಸೀಕ್ವಿನ್ಡ್ ಗೌನ್ ಧರಿಸಿದ್ದರು

ರಶ್ಮಿಕಾ ಅವರ ಉಡುಗೆಯನ್ನು ಅಂತರರಾಷ್ಟ್ರೀಯ ಖ್ಯಾತಿಯ ವಸ್ತ್ರ ವಿನ್ಯಾಸಕ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ್ದರು.
ಉಡುಗೆ ಜೊತೆಗೆ ಸುನಿತಾ ಶೇಖಾವತ್ ವಿನ್ಯಾಸದ ಆಭರಣಗಳನ್ನು ಧರಿಸಿದ್ದರು.

ರಶ್ಮಿಕಾ ಮಂದಣ್ಣ ಅವರು ಈ ಪ್ರಶಸ್ತಿ ಸಮಾರಂಭದಲ್ಲಿ ಹಾಲಿವುಡ್ ನಟ ವಿನ್ಸ್ಟನ್ ಡ್ಯೂಕ್ ಜೊತೆಗೆ 'ಬೆಸ್ಟ್ ಅನಿಮೇಷನ್ ಆಫ್ ದಿ ಇಯರ್' ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ರಶ್ಮಿಕಾ ಜೊತೆಗಿನ 'ಬೆಸ್ಟ್ ಅನಿಮೇಷನ್ ಆಫ್ ದಿ ಇಯರ್' ಪ್ರಶಸ್ತಿ ಪ್ರದಾನ ಮಾಡಿದ ನಟ ವಿನ್ಸ್ಟನ್ ಡ್ಯೂಕ್ ಅವರು ,'ಈ ನಟಿಯ ಜೊತೆ ವೇದಿಕೆ ಹಂಚಿಕೊಂಡಿದ್ದು ಕನಸು ಎನಿಸುತ್ತಿದೆ' ಎಂದಿದ್ದಾರೆ.

