ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಹಿರಿಯ ನಾಯಕ,ರಾಜ್ಯದ ಉನ್ನತ ಶಿಕ್ಷಣ ಹಾಗೂ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಭಾನುವಾರ ನಿಧನರಾಗಿದ್ದಾರೆ.
ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಯುವಜನ ವ್ಯವಹಾರಗಳಂತಹ ಪ್ರಮುಖ ಸಚಿವಾಲಯಗಳ ಉಸ್ತುವಾರಿ ವಹಿಸಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರ ಅಗಲಿಕೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ತೀವ್ರ ಕಂಬನಿ ಮಿಡಿದಿದೆ. 'ಜೆಎಂಎಂನ ನಿಷ್ಠಾವಂತ ನಾಯಕ ಹಾಗೂ ಸಚಿವರಾಗಿದ್ದ ಸುದಿವ್ಯ ಕುಮಾರ್ ಅವರ ಅಕಾಲಿಕ ಅಗಲಿಕೆಯಿಂದ ಜೆಎಂಎಂ ಕುಟುಂಬವೇ ಆಘಾತಕ್ಕೊಳಗಾಗಿದೆ. ಅವರ ನಿಧನ ಪಕ್ಷಕ್ಕೆ, ಸರ್ಕಾರಕ್ಕೆ ಹಾಗೂ ಇಡೀ ಜಾರ್ಖಂಡ್ ರಾಜ್ಯಕ್ಕೆ ತುಂಬಲಾರದ ನಷ್ಟ' ಎಂದು ಪಕ್ಷವು ತನ್ನ 'ಎಕ್ಸ್' ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದೆ.

