Dailyhunt Logo
  • Light mode
    Follow system
    Dark mode
    • Play Story
    • App Story
ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಬಂದಿಳಿದ ಡೊನಾಲ್ಡ್‌ ಟ್ರಂಪ್‌

ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಬಂದಿಳಿದ ಡೊನಾಲ್ಡ್‌ ಟ್ರಂಪ್‌

ವಿಯಾನ್‌ ಲಿ ಬಾನ್‌: ಇರಾನ್‌ನೊಂದಿಗೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಿದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್‌ನ ಇವಿಯಾನ್‌ ಲಿ ಬಾನ್‌ ನಗರಕ್ಕೆ ಸೋಮವಾರ ಬಂದಿಳಿದಿದ್ದಾರೆ.

ಅಮೆರಿಕವು ಇರಾನ್‌ನೊಂದಿಗೆ ಯುದ್ಧ ಘೋಷಿಸುವ ಮೊದಲು ತಮ್ಮೊಂದಿಗೆ ಒಮ್ಮೆಯೂ ಚರ್ಚಿಸಲಿಲ್ಲ ಎಂಬ ಅಸಮಾಧಾನವು ಜಿ7ರ ಪ್ರಮುಖ ದೇಶಗಳ ನಾಯಕರಾದ ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್, ಜರ್ಮನಿಯ ಛಾನ್ಸಲರ್‌ ಫ್ರಿಡ್‌ರಿಚ್‌ ಮೆರ್ಝ್‌ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಲ್ಲಿ ಇತ್ತು.

ಯುದ್ಧದ ವೇಳೆ ಅಮೆರಿಕಕ್ಕೆ ಈ ದೇಶಗಳು ಸಹಕಾರ ನೀಡಿಲ್ಲ ಎಂಬ ಬಗ್ಗೆ ಟ್ರಂಪ್‌ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸುಂಕ ವಿಧಿಸುವುದು ಸೇರಿ ಹಲವು ಎಚ್ಚರಿಕೆಗಳನ್ನೂ ಟ್ರಂಪ್‌ ನೀಡಿದ್ದರು. ಯುದ್ಧ ಅಂತ್ಯಗೊಳಿಸಿದ ಬಗ್ಗೆ ಈ ದೇಶಗಳ ನಾಯಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣದಿಂದ ಟ್ರಂಪ್‌ ಅವರನ್ನು ಈ ನಾಯಕರು ಭೇಟಿ ಮಾಡುತ್ತಿರುವುದು ಪ್ರಾಮುಖ್ಯ ಪಡೆದಿದೆ.

ಫ್ರಾನ್ಸ್‌ನೊಂದಿಗೆ ಸಂಘರ್ಷ ಮುಂದುವರಿಸಿದ ಟ್ರಂಪ್‌: ಶೃಂಗಸಭೆಗೆ ಭೇಟಿ ನೀಡುವ ಮುನ್ನ ಟ್ರಂಪ್‌ ಅವರು 'ನ್ಯೂಯಾರ್ಕ್‌ ಪೋಸ್ಟ್‌'ಗೆ ಸಂದರ್ಶನ ನೀಡಿದ್ದು, 'ಅಮೆರಿಕದ ಐಟಿ ಕಂಪನಿಗಳ ಮೇಲೆ ಡಿಜಿಟಲ್‌ ತೆರಿಗೆ ಹೇರಿರುವುದನ್ನು ತೆರವು ಮಾಡದಿದ್ದರೆ, ಫ್ರಾನ್ಸ್‌ನ ವೈನ್‌ನ ಮೇಲೆ ಶೇ 100ರಷ್ಟು ಸುಂಕ ವಿಧಿಸದೆ ಬೇರೆ ದಾರಿ ಇಲ್ಲ' ಎಂದು ಟ್ರಂಪ್‌ ಅವರು ಮ್ಯಾಕ್ರನ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani