Dailyhunt Logo
  • Light mode
    Follow system
    Dark mode
    • Play Story
    • App Story
JioHotstarನಲ್ಲಿ ಬಿಡುಗಡೆಯಾಗಲಿದೆ ವಿಕ್ರಾಂತ್ ಮ್ಯಾಸ್ಸೆ ನಟನೆಯ ವೆಬ್ ಸರಣಿ

JioHotstarನಲ್ಲಿ ಬಿಡುಗಡೆಯಾಗಲಿದೆ ವಿಕ್ರಾಂತ್ ಮ್ಯಾಸ್ಸೆ ನಟನೆಯ ವೆಬ್ ಸರಣಿ

12th ಫೇಲ್ ಖ್ಯಾತಿಯ ವಿಕ್ರಾಂತ್ ಮ್ಯಾಸ್ಸೆ ಅಭಿನಯನದ ಹೊಸ ವೆಬ್ ಸರಣಿ 'ಪ್ರೀತಂ & ಪೆಡ್ರೊ', ಜಿಯೊ ಹಾಟ್‌ಸ್ಟಾರ್‌ನಲ್ಲಿ ಜುಲೈ 3ರಿಂದ ಸ್ಟ್ರೀಮಿಂಗ್‌ ಆಗಲಿದೆ.

'ಪ್ರೀತಂ & ಪೆಡ್ರೊ' ವೆಬ್ ಸರಣಿಯ ಫಸ್ಟ್‌ ಲುಕ್‌ ಗಮನ ಸೆಳೆದಿತ್ತು. ಇದೀಗ ಟ್ರೈಲರ್‌ ಬಿಡುಗಡೆಯಾಗಿದ್ದು, ಈ ಸರಣಿಯು ಹಾಸ್ಯ ಮತ್ತು ನಿಗೂಢತೆಗಳಿಂದ ಕೂಡಿದೆ.

ಈ ಸರಣಿಯು ಗೋವಾದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಪೊಲೀಸ್ ಮತ್ತು ಟೆಕ್‌ ಪರಿಣಿತ ಪಾತ್ರಗಳು ಜಾಲವೊಂದರಲ್ಲಿ ಸಿಲುಕಿಕೊಳ್ಳುತ್ತವೆ. ಆ ರಹಸ್ಯವನ್ನು ಅವರು ಹೇಗೆ ಭೇದಿಸುತ್ತಾರೆ ಎನ್ನುವುದರ ಸುತ್ತ ಈ ಕಥೆ ಸಾಗುತ್ತದೆ.

ಅವಿನಾಶ್ ಅರುಣ್ ಈ ವೆಬ್‌ ಸರಣಿಗೆ ಆಯಕ್ಷನ್ ಕಟ್ ಹೇಳಿದ್ದಾರೆ. ರಾಜಕುಮಾರ್ ಹಿರಾನಿ ಅವರು ಚಿತ್ರಕಥೆ ಬರೆದಿದ್ದಾರೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮ್ಯಾಸ್ಸೆ, ವಿರ್ ಹಿರಾನಿ, ಮೋನಾ ಸಿಂಗ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani