Dailyhunt Logo
  • Light mode
    Follow system
    Dark mode
    • Play Story
    • App Story
ಜೂನ್‌ನಲ್ಲಿ ಯುಪಿಐ ವಹಿವಾಟು ಇಳಿಕೆ: ಕಳೆದ ವರ್ಷಕ್ಕಿಂತ ಶೇ 20ರಷ್ಟು ಪ್ರಗತಿ

ಜೂನ್‌ನಲ್ಲಿ ಯುಪಿಐ ವಹಿವಾಟು ಇಳಿಕೆ: ಕಳೆದ ವರ್ಷಕ್ಕಿಂತ ಶೇ 20ರಷ್ಟು ಪ್ರಗತಿ

ನವದೆಹಲಿ: ಜೂನ್‌ ತಿಂಗಳಲ್ಲಿ ಯುಪಿಐ ವಹಿವಾಟು ಇಳಿಕೆಯಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.

ಫ್ರಾನ್ಸ್‌ನ 'ಗ್ಯಾಲರೀಸ್ ಲಫಯೆಟ್ಟೆ'ಯಲ್ಲಿ ಯುಪಿಐ ಪಾವತಿ ಸೇವೆ ಆರಂಭ

ಜೂನ್‌ನಲ್ಲಿ ₹28.9 ಲಕ್ಷ ಕೋಟಿ ಮೌಲ್ಯದ ಯುಪಿಐ ವಹಿವಾಟು ನಡೆದಿದೆ.

2026ರ ಮೇ ತಿಂಗಳಿನಲ್ಲಿ ಯುಪಿಐ ವಹಿವಾಟುಗಳು ₹29.9 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಅದು ಸಾರ್ವಕಾಲಿಕ ಗರಿಷ್ಠ.

ಬುಧವಾರ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಜೂನ್‌ನಲ್ಲಿ 2,272 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಹಿಂದಿನ ತಿಂಗಳಲ್ಲಿ ಇದು 2,320 ಕೋಟಿ ವಹಿವಾಟು ನಡೆದಿತ್ತು.

ಕಳೆದ ವರ್ಷ ಜೂನ್‌ನಲ್ಲಿ ₹24.03 ಲಕ್ಷ ಕೋಟಿ ವಹಿವಾಟು ನಡೆದಿದೆ. ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ಬಾರಿ ಶೇ 20 ರಷ್ಟು ಬೆಳವಣಿಗೆಯಾಗಿದೆ.

2025ರ ಜೂನ್‌ನಲ್ಲಿ ಯುಪಿಐ ಮೂಲಕ 1,830 ಕೋಟಿ ವಹಿವಾಟುಗಳು ನಡೆದಿದ್ದವು. ಒಂದು ವರ್ಷದಲ್ಲಿ ಈ ಸಂಖ್ಯೆ 2,272 ಕೋಟಿಗೆ ಏರಿಕೆಯಾಗಿದೆ.

'ಜೂನ್‌ನಲ್ಲಿ ಒಟ್ಟು ವಹಿವಾಟುಗಳ ಸಂಖ್ಯೆ ಮೇ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದ್ದರೂ, ಪ್ರತಿದಿನ ಸರಾಸರಿ 75.7 ಕೋಟಿ ವಹಿವಾಟುಗಳು ನಡೆದಿವೆ. ಯುಪಿಐ ಆರಂಭವಾದ ಬಳಿಕ ದಾಖಲಾದ ಅತಿ ಹೆಚ್ಚಿನ ದೈನಂದಿನ ಸರಾಸರಿ ಇದಾಗಿದೆ. ಕಡಿಮೆ ಮೊತ್ತದ ಪಾವತಿಗಳಿಗೂ ಜನರು ಯುಪಿಐಯನ್ನೇ ಹೆಚ್ಚಾಗಿ ಬಳಸುತ್ತಿರುವುದನ್ನು ಇದು ತೋರಿಸುತ್ತದೆ' ಎಂದು ಕ್ಯಾಶ್‌ಫ್ರೀ ಪೇಮೆಂಟ್ಸ್‌ನ ಸಹ-ಸಂಸ್ಥಾಪಕ ರೀಜು ದತ್ತಾ ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಹಲವು ಮಾರ್ಗದಲ್ಲಿ ಯುಪಿಐ ಸಮಸ್ಯೆ
Dailyhunt
Disclaimer: This content has not been generated, created or edited by Dailyhunt. Publisher: Prajavani