ವಾಣಿಜ್ಯ ಸುದ್ದಿ
'ಜ್ಯುವೆಲ್ಸ್ ಆಫ್ ಇಂಡಿಯಾ' ಆಭರಣ ಮೇಳ

ಬೆಂಗಳೂರು: ಚಿನ್ನಾಭರಣ ಸಂಸ್ಥೆ 'ಜ್ಯುವೆಲ್ಸ್ ಆಫ್ ಇಂಡಿಯಾ'ದ ಅತಿದೊಡ್ಡ ಆಭರಣ ಮೇಳ ನಗರದ ಅಶೋಕ್ ಲಲಿತ್‌ನಲ್ಲಿ ಪ್ರಾರಂಭವಾಗಿದ್ದು, ಭಾನುವಾರದವರೆಗೆ (ಜ.24) ನಡೆಯಲಿದೆ.
ಮೇಳಕ್ಕೆ ಪೂರ್ವಭಾವಿಯಾಗಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಮಿಸ್ ಇಂಡಿಯಾ ಡಾ. ಶ್ರುತಿ ಗೌಡ ಅವರು 'ಜ್ಯುವೆಲ್ ಆಫ್ ಇಂಡಿಯಾದ ಪುರಾತನ ಆಭರಣಗಳನ್ನು ಧರಿಸಿಕೊಂಡು ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.
ಅಶೋಕ್ ಲಲಿತ್ ಹೋಟೆಲ್‌ನಲ್ಲಿ ಶುಕ್ರವಾರ ಮೇಳವನ್ನು ಉದ್ಘಾಟಿಸಲಾಯಿತು.
ಸಂಸ್ಥೆಯ ಪ್ರಚಾರ ರಾಯಭಾರಿ ರಾಧಿಕಾ ಕುಮಾರಸ್ವಾಮಿ ಮಾತನಾಡಿ, 'ಆಭರಣಗಳ ಖರೀದಿಗೆ ಇದು ಅತ್ಯುತ್ತಮ ಅವಕಾಶ. ಮಹಿಳೆಯರ ಮನಸ್ಸು ಮತ್ತು ಹೃದಯ ಗೆದ್ದ ಆಭರಣ ಸಂಸ್ಥೆ ಇದು' ಎಂದರು.
ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳಿಂದ ಒಂದೇ ವೇದಿಕೆಯಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನ ನಡೆಯುತ್ತಿದೆ.
ಆಭರಣ ಮೇಳದ ಸಂಚಾಲಕ ಸಂದೀಪ್ ಬೇಕಲ್, 'ಕೋವಿಡ್ ಬಿಕ್ಕಟ್ಟಿನ ನಂತರ, ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಆಭರಣ ಮೇಳ ಇದು' ಎಂದರು.